ಡಿಕೆ ಶಿವಕುಮಾರ್ ಭೇಟಿ ಮಾಡಿದ ಬಿಎಸ್ ವೈ: ರಹಸ್ಯ ಚರ್ಚೆ!

Webdunia
ಗುರುವಾರ, 29 ನವೆಂಬರ್ 2018 (09:28 IST)
ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಮ್ಮ ಆಪ್ತರ ಬಳಗದೊಂದಿಗೆ ಭೇಟಿಯಾಗಿ ಚರ್ಚೆ ನಡೆಸಿದ್ದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.


ಶಿವಮೊಗ್ಗ ಜಿಲ್ಲೆಯ ಕೆಲವು ತಾಲೂಕುಗಳ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಡಿಕೆಶಿ ಅವರನ್ನು ಭೇಟಿಯಾಗಿದ್ದೆ ಎಂದು ಬಿಎಸ್ ವೈ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದರೂ ಈ ಚರ್ಚೆಯ ನಂತರ ಇಬ್ಬರೂ ನಾಯಕರು ಪ್ರತ್ಯೇಕವಾಗಿ ಕೆಲ ಹೊತ್ತು ಮಾತುಕತೆ ನಡೆಸಿರುವುದು ಮತ್ತು ಮಾತುಕತೆ ನಂತರ ಡಿಕೆಶಿ ಶೇ.101 ರಷ್ಟು ನನ್ನ ಆತ್ಮೀಯ ಸ್ನೇಹಿತ’ ಎಂದು ಬಿಎಸ್ ವೈ ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕೆಲವು ಮೂಲಗಳ ಪ್ರಕಾರ ಡಿಕೆಶಿಯನ್ನು ಬಿಜೆಪಿಗೆ ಸೆಳೆಯಲು ಹೈಕಮಾಂಡ್ ಸೂಚನೆಯಂತೆ ಬಿಎಸ್ ವೈ ಈ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ. ಈ ಭೇಟಿ ಸಂದರ್ಭ ಬಿಎಸ್ ವೈ ಜತೆಗೆ ಪುತ್ರ, ಸಂಸದ ಬಿವೈ ರಾಘವೇಂದ್ರ, ಹರತಾಳು ಹಾಲಪ್ಪ, ಪ್ರಭಾಕರ ಕೋರೆ ಮುಂತಾದವರೂ ಇದ್ದರು. ಡಿಕೆ ಶಿವಕುಮಾರ್ ಕೂಡಾ ಬಿಎಸ್ ವೈ ಬರುತ್ತಾರೆಂಬ ಸುದ್ದಿ ತಿಳಿದು ಹೈದರಾಬಾದ್ ಕಾರ್ಯಕ್ರಮ ರದ್ದುಗೊಳಿಸಿ ತಮ್ಮ ಮನೆಯಲ್ಲಿ ಖುದ್ದಾಗಿ ಪುಷ್ಪಗುಚ್ಛ ಹಿಡಿದು ಬಿಜೆಪಿ ನಾಯಕರನ್ನು ಸ್ವಾಗತಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತೈಲ ದರ ಹೆಚ್ಚಳದಿಂದ ಲಾಭ ಆಗ್ತಿರೋದೇ ರಾಜ್ಯಕ್ಕೆ: ಆರ್‌ ಅಶೋಕ್ ವಾಗ್ದಾಳಿ

ನಿನ್ನ ಮಗುಗೆ ಮೊಬೈಲ್ ಕೊಡಕ್ಕೆ ಹೇಳು ಎಂದಿದ್ದಕ್ಕೆ ಮರಿ ಕೋತಿಯ ಬಳಿ ತಾಯಿ ಕೋತಿ ಏನು ಮಾಡ್ತು ನೋಡಿ Video

ಮೃತ ಮಗಳಿಗಿಂತ ವಿಚ್ಛೇದಿತ ಮಗಳನ್ನೇ ಹೊಂದುವುದು ಉತ್ತಮ: ತ್ವಿಶಾ ಕೇಸ್‌ ಬಗ್ಗೆ ಸುಪ್ರೀಂ

ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ಪ್ರಾರ್ಥನೆಗೆ ಅವಕಾಶವಿಲ್ಲ: ಬಕ್ರೀದ್‌ಗೂ ಮುನ್ನಾ ಸಿಎಂ ಯೋಗಿ ಖಡಕ್ ರೂಲ್ಸ್‌

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆಗೆ ಪೆಟ್ರೋಲ್ ಬಾಂಬ್ ಎಸೆದ ಯುವಕ: ಭಯಾನಕ Video

ಮುಂದಿನ ಸುದ್ದಿ
Show comments