Publish Date: Tue, 27 Feb 2018 (17:13 IST)
Updated Date: Tue, 27 Feb 2018 (17:18 IST)
ಹುಬ್ಬಳ್ಳಿ: ದಾವಣಗೆರೆಯಲ್ಲಿ ನಡೆದ ರೈತ ಸಮಾವೇಶಕ್ಕೆ ಬಂದ ಪ್ರಧಾನಿ ಮೋದಿಗೆ ಅದ್ಭುತ ಸ್ವಾಗತ ದೊರಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜನ್ಮ ದಿನದಂದು ನಡೆದ ಸಮಾವೇಶದಲ್ಲಿ ಬಿಜೆಪಿ ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಿತು.
ಸಮಾವೇಶದಲ್ಲಿ ಮುಷ್ಠಿ ಅಕ್ಕಿ ಯೋಜನೆಗೆ ಚಾಲನೆ ನೀಡಲಾಯಿತು. ಈ ವೇಳೆ ಭಾಷಣ ಮಾಡಿದ ಪ್ರಧಾನಿ ಮೋದಿ ನೇರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ಧ ರಾಮಯ್ಯ ಎಂದರೆ ಸಿದ್ಧ ರೂಪಯಾ ಎಂದು ವ್ಯಂಗ್ಯ ಮಾಡಿದರು. ಆದರೆ ರೈತ ಸಮಾವೇಶದಲ್ಲಿ ಮಹದಾಯಿ ವಿವಾದದ ಬಗ್ಗೆ ಮೋದಿ ತುಟಿ ಬಿಚ್ಚಲಿಲ್ಲ.
ಸಚಿವ ಡಿಕೆಶಿ ಮೇಲೆ ನಡೆದ ಐಟಿ ದಾಳಿ ಬಗ್ಗೆಯೂ ಪರೋಕ್ಷವಾಗಿ ಮೋದಿ ಟಾಂಗ್ ಕೊಟ್ಟರು. ಈ ಸಂದರ್ಭದಲ್ಲಿ ಬಿಎಸ್ ವೈ, ಪ್ರಧಾನಿ ಮೋದಿಗೆ ನೇಗಿಲು ಉಡುಗೊರೆಯಾಗಿ ಕೊಟ್ಟರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ