Publish Date: Tue, 03 Mar 2020 (08:00 IST)
Updated Date: Tue, 03 Mar 2020 (11:07 IST)
ಚೆನ್ನೈ : ಅಪ್ರಾಪ್ತ ಬಾಲಕನೊಬ್ಬ ತನ್ನ ತಂಗಿಯ ಕೈಕಾಲು ಕಟ್ಟಿ ಬಲವಂತವಾಗಿ ಅತ್ಯಾಚಾರವೆಸಗಿದ ಘಟನೆ ಚೆನ್ನೈ ನಲ್ಲಿ ನಡೆದಿದೆ.
15 ವರ್ಷದ ಸಹೋದರ ತನ್ನ 14 ವರ್ಷದ ತಂಗಿಗೆ ಬೆದರಿಕೆ ಹಾಕಿ ಆಕೆಯ ಕೈಕಾಲು ಕಟ್ಟಿ ನಿರಂತರವಾಗಿ ರೇಪ್ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆಕೆಯ ಮೇಲೆ ಆಗಾಗ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ.ಈ ಬಗ್ಗೆ ಬಾಲಕಿ ತನ್ನ ಗೆಳತಿಯರ ಬಳಿ ಹೇಳಿಕೊಂಡ ಹಿನ್ನಲೆಯಲ್ಲಿ ಗೆಳತಿಯರು ಆಕೆಯ ಪೋಷಕರಿಗೆ ತಿಳಿಸಿದ್ದಾರೆ.
ಬಾಲಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.