Select Your Language

Notifications

webdunia
webdunia
webdunia
webdunia

ಡಿಕೆಶಿ ಪರ ಸಹೋದರ ಡಿ.ಕೆ ಸುರೇಶ್​ ಲಾಬಿ

ಡಿಕೆಶಿ ಪರ ಸಹೋದರ ಡಿ.ಕೆ ಸುರೇಶ್​ ಲಾಬಿ
bangalore , ಸೋಮವಾರ, 15 ಮೇ 2023 (16:00 IST)
KPCC ಅಧ್ಯಕ್ಷ ಡಿ.ಕೆ ಶಿವಕುಮಾರ್​ರನ್ನು ಮುಖ್ಯಮಂತ್ರಿ ಮಾಡಿ ಎಂದು ಡಿಕೆಶಿ ಪರ ಸಂಸದ, ಸಹೋದರ ಡಿ.ಕೆ ಸುರೇಶ್​ ತೀವ್ರ ಲಾಬಿ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್​​​​ ಉಸ್ತುವಾರಿ ರಣದೀಪ್​ ಸಿಂಗ್​​ ಸುರ್ಜೇವಾಲರನ್ನು ಭೇಟಿ ಮಾಡಿದ ಸಂಸದ ಡಿ.ಕೆ ಸುರೇಶ್, ಡಿಕೆಶಿಯನ್ನು ಸಿಎಂ ಮಾಡಿ ಎಂದು ಮನವಿ ಮಾಡಿದ್ದಾರೆ. ಹೈಕಮಾಂಡ್ ವಿಳಂಬ ಧೋರಣೆಗೆ ಡಿ.ಕೆ ಸುರೇಶ್​ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಸಾಲಿನ ನಿರ್ಣಯ ಅಂಗೀಕರಿಸಿ ಕಳುಹಿಸಲಾಗಿದೆ. ಆದರೆ ನಿರ್ಧಾರ ಪ್ರಕಟಿಸಲು ವಿಳಂಬ ಯಾಕೆ ಎಂದು ಸುರ್ಜೇವಾಲ ಬಳಿ ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ. ಸಿಎಂ ಆಕಾಂಕ್ಷಿಗಳಿಗೆ ದೆಹಲಿಗೆ ಬರುವಂತೆ ಹೈಕಮಾಂಡ್​​​ ಬುಲಾವ್ ನೀಡಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಮಧ್ಯಾಹ್ನದ ನಂತರ ಡಿ.ಕೆ ಶಿವಕುಮಾರ್​​​ ಸಹ ದೆಹಲಿಗೆ ತೆರಳುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ- ಬಿಕೆ ಹರಿಪ್ರಸಾದ್