Select Your Language

Notifications

webdunia
webdunia
webdunia
webdunia

ಹಾಡಹಗಲೇ ಮನೆಗೆ ನುಗ್ಗಿ ದರೋಡೆ

Broke into the house in broad daylight
ಆನೇಕಲ್​​ , ಭಾನುವಾರ, 5 ಮಾರ್ಚ್ 2023 (13:47 IST)
ಕಳ್ಳರು ಹಾಡಹಗಲೇ ಮನೆಗೆ ನುಗ್ಗಿ ದರೋಡೆ ಮಾಡಿರುವ ಘಟನೆ ಆನೇಕಲ್​​ನ ಲಕ್ಷ್ಮೀ‌ನಗರ ಬಡಾವಣೆಯಲ್ಲಿ ನಡೆದಿದೆ. ಲಕ್ಷ್ಮೀನಗರ ನಿವಾಸಿ ಭಾಗ್ಯಲಕ್ಷ್ಮಿ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ಓರ್ವ ಕಳ್ಳ ಮನೆಗೆ ನುಗ್ಗಿ ನಾಗೇಶ್ ಇದ್ದಾರಾ ಎಂದು ಕೇಳಿ ಚಾಕು ತೋರಿಸಿದ್ದಾನೆ.. ಅದಾದ ನಂತರ ಇನ್ನಿಬ್ಬರು ಕಳ್ಳರು ಎಂಟ್ರಿ ಕೊಟ್ಟಿದ್ದಾರೆ.. ಮನೆಯಲ್ಲಿದ್ದ ಕೀರ್ತನಾ ಎಂಬ ಯುವತಿಯ ಕೈಕಾಲು ಕಟ್ಟಿ ಹಣ ದೋಚಿ ಪರಾರಿಯಾಗಿದ್ದಾರೆ.. ಕಳ್ಳರ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್​ ಪೊಲೀಸರು, ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್​ ತಗುಲಿ ಕಬ್ಬಿನ ಬೆಳೆ ಭಸ್ಮ