Publish Date: Sat, 11 Nov 2023 (19:01 IST)
Updated Date: Sat, 11 Nov 2023 (19:20 IST)
ಸರ್ಕಾರಿ ಸಾರಿಗೆ ಬಸ್‌ಗಳ ಬಳಿಕ ಖಾಸಗಿ ಬಸ್‌ಗಳಲ್ಲೂ ಅಂಧರು ಹಾಗೂ ಅಂಗವಿಕಲರಿಗೆ ಸಹಾಯವಾಗುವಂತೆ ಆಡಿಯೋ ರೂಪದಲ್ಲಿ ಪ್ರಕಟಣೆ ಹೊರಡಿಸುವ ವ್ಯವಸ್ಥೆ ಜಾರಿಗೊಳಿಸಲು ಸೂಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿದೇರ್ಶಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎನ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶವನ್ನ ನೀಡಿದೆ.