Select Your Language

Notifications

webdunia
webdunia
webdunia
webdunia

ತಾಳಿ ಕಟ್ಟೋ ಕೊನೆ ಘಳಿಗೆಯಲ್ಲಿ ವಧುವಿನ ಹೈಡ್ರಾಮಾ!

webdunia
ಚಿಕ್ಕಬಳ್ಳಾಪುರ , ಬುಧವಾರ, 25 ಮೇ 2022 (14:52 IST)
ಚಿಕ್ಕಬಳ್ಳಾಪುರ : ಮೊನ್ನೆ ಮೊನ್ನೆಯಷ್ಟೇ ಮೈಸೂರಿನಲ್ಲಿ ತಾಳಿ ಕಟ್ಟೋ ಕೊನೆ ಘಳಿಗೆಯಲ್ಲಿ ವಧು ತಲೆ ಸುತ್ತಿ ಬಿದ್ದು ನಾಟಕ ಮಾಡುವ ಮೂಲಕ ಮದುವೆ ಮುರಿದಿದ್ದಳು.
 
ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲೂ ರಾತ್ರಿ ಆರತಕ್ಷತೆಯಲ್ಲಿ ಭಾಗಿಯಾದ ವಧು ರಾತ್ರೋ ರಾತ್ರಿ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದು, ಮದುವೆ ಮುರಿದುಬಿದ್ದಿದೆ.

ಹೌದು ಗೌರಿಬಿದನೂರು ನಾಗರೆಡ್ಡಿ ಬಡಾವಣೆಯ ವಧು ವೆನ್ನಲ ಹಾಗೂ ಕರೇಕಲ್ಲಹಳ್ಳಿಯ ವರ ಸುರೇಶ್ ಮದುವೆ ನಿಶ್ಚಯವಾಗಿತ್ತು. ಗುರು ಹಿರಿಯರ ನಿಶ್ಚಯಿಸಿದಂತೆ ವಿದುರಾಶ್ವತ್ಥ ಗ್ರಾಮದ ಚನ್ನರಾಯಸ್ವಾಮಿ ಕಲ್ಯಾಣಮಂಟಪದಲ್ಲಿ ರಾತ್ರಿ ಆರತಕ್ಷತೆಯೂ ನೇರವೇರಿತ್ತು. ಆದರೆ ರಾತ್ರೋರಾತ್ರಿ ವಧು ವೆನ್ನಲ ತನ್ನ ಪ್ರಿಯಕರ ಸೋದರ ಮಾವ ಪ್ರವೀಣ್ ಜೊತೆ ಎಸ್ಕೇಪ್ ಆಗಿದ್ದಾಳೆ. 

ಇದರಿಂದ ಇಂದು ನಡೆಯಬೇಕಿದ್ದ ಮದುವೆ ಮುರಿದುಬಿದ್ದಿದೆ. ಹೀಗಾಗಿ ಸಂಬಂಧಿಕರು ಗೌರಿಬಿದನೂರು ನಗರ ಪೊಲೀಸರ ಮೊರೆ ಹೋಗಿದ್ದು ವಧು ನಾಪತ್ತೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮೇ 16ಕ್ಕೆ ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿದ್ದೇನೆ: ಕಪಿಲ್‌ ಸಿಬಾಲ್‌