Select Your Language

Notifications

webdunia
webdunia
webdunia
webdunia

ರೂಲ್ಸ್ ಬ್ರೇಕ್ ಮಾಡಿ ಪ್ರತಿಷ್ಠಿತ ಹೊಟೇಲ್ ನಲ್ಲಿ ಲೇಟ್ ನೈಟ್ ಪಾರ್ಟಿ

ರೂಲ್ಸ್ ಬ್ರೇಕ್ ಮಾಡಿ ಪ್ರತಿಷ್ಠಿತ ಹೊಟೇಲ್ ನಲ್ಲಿ ಲೇಟ್ ನೈಟ್ ಪಾರ್ಟಿ
bangalore , ಶನಿವಾರ, 9 ಏಪ್ರಿಲ್ 2022 (18:36 IST)
ಡ್ರಗ್ಸ್ ಜಾಲ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ ಅದಕ್ಕಾಗಿ ಪೊಲೀಸರು ಕೂಡ ಹಗಲಿರುಳು ಡ್ರಗ್ಸ್ ದಂಧೆಗಳ ಮೇಲೆ ಕಣ್ಷಿಟ್ಟಿದ್ದಾರೆ. ಯಾವುದೇ ಸಣ್ಣ ಕ್ಲೂ ಸಿಕ್ಕಿದರೂ ಕೂಡ ಬಿಡದೆ ಬೆನ್ನತ್ತುತ್ತಿರುವ ಹಿನ್ನಲೆ ಪೆಡ್ಲರ್ ಗಳಿಗೆ ಭಯ ಶುರುವಾಗಿದೆ.ಆದ್ರೆ, ಅದರ ಜಡುವೆಯೂ ಇಲ್ಲೊಂದ್ ಟೀಂ ಲೇಟ್ ನೈಟ್ ಪಾರ್ಟಿ ಮಾಡಿ ಸಿಸಿಬಿ ಪೊಲೀಸ್ರ ದಾಳಿಗೊಳಗಾಗಿ ಅಂದರ್ ಆಗಿದ್ದಾರೆ.ಸಿಕ್ಕ ಖಚಿತ ಮಾಹಿತಿ ಆಧಾರದ ಮೇಲೆ ಮಾರತ್ ಹಳ್ಳಿಯ ಈ ಹೊಟೇಲ್ ಮೇಲೆ ಸಿಸಿಬಿ ಪೊಲೀಸ್ರು ದಿಢೀರನೆ ದಾಳಿ ನಡೆಸಿದ್ರು. ಮಾರತ್ ಹಳ್ಳಿ ರಿಂಗ್ ರೋಡ್ ನಲ್ಲಿರೋ ಈ ಕಾಮಿಟ್ ಹೊಟೇಲ್ ಮೇಲೆ ದಾಳಿ ನಡೆಸಿದ 
 
ವಿ- ಡ್ರಗ್ ಗಳು ಸರಬರಾಜಾಗೋದು ಬಹುತೇಕ ಪಾರ್ಟಿಗಳಲ್ಲೆ.. ಈ ಹಿನ್ನಲೆ ಸಿಸಿಬಿ ನೆನ್ನೆ ತಡರಾತ್ರಿ ಹೋಟೇಲ್ ಒಂದರ ಮೇಲೆ ದಾಳಿ ನಡೆಸಿತ್ತು. ಅವಧಿ ಪೂರ್ಣವಾದರೂ ಪಾರ್ಟಿಗಳು ಯಾವ ಆತಂಕವೂ ಇಲ್ಲದೆ ನಡೆಯುತ್ತಿತ್ತು ಈ ಹಿನ್ನಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
 
ವಿ- ಕಾಮೇಟ್ ಎಂಬ ಹೊಟೇಲ್ ನಲ್ಲಿ ನಡೆದ ಪಾರ್ಟಿ ಇದು.. ಮಾರತ್ ಹಳ್ಳಿ ಔಟರ್ ರಿಂಗ್ ರೋಡ್ ಬಳಿ ಇರುವ ಐಷಾರಾಮಿ ಹೋಟೆಲ್ ಇದು. ಈ ಹೊಟೇಲ್ ನಲ್ಲಿ ಕಾನೂನನ್ನ ಮೀರಿ ಇಂದು ಬೆಳಗಿನ ಜಾವ ಮೂರುವರೆವರೆಗೂ ಪಾರ್ಟಿ ನಡೆದಿತ್ತು. ಡಿಜೆಗಳನ್ನ ಬಳಸಿ ಪಾರ್ಟಿ ಮಾಡ್ತಿದ್ದರು . ಖಚಿತ ಮಾಹಿತಿ ಬಂದ ಹಿನ್ನಲೆ ದಾಳಿ ಇಟ್ಟ ಸಿಸಿಬಿ ತಂಡವನ್ನ ನೋಡಿ ಯುವಕ ಯುವತಿಯರು ಶಾಕ್ ಆಗಿದ್ದರು. ಕೆಲವರು ಹಠಾತ್ ದಾಳಿಯಿಂದ ಪೊಲೀಸರ ಮೇಲೆಯೇ ಕೂಗಾಡಲು ಶುರು ಮಾಡಿದ್ರು. ಬಹುತೇಕರು ನಶೆಯಲ್ಲಿದ್ದರಿಂದ ಸ್ವಲ್ಪ ಮಟ್ಟಿಗೆ ಕಿರಿಕ್ ನಡೆದಿತ್ತು. ಈ ಬಗ್ಗೆ ದಾಳಿ ನಡೆಸಿದ ಸಿಬ್ಬಂಧಿಗಳು ಮೊಬೈಲ್ ಶೂಟ್ ಮಾಡಿಕೊಂಡಿದ್ದರು . ಇನ್ನು ದಾಳಿ ವೇಳೆ 64 ಜನ ಯುವಕರು ಹಾಗು 24 ಜನ ಯುವತಿಯರು ಪತ್ತೆಯಾಗಿದ್ದರು. ದಕ್ಷಿಣ ಆಫ್ರೀಕಾದ ವ್ಯಕ್ತಿಯೊಬ್ಬ ಈ ಪಾರ್ಟಿಯನ್ನ ಆಯೋಜನೆ ಮಾಡಿದ್ನಂತೆ. ಈ ಹಿಂದೆ ಕೂಡ ಇದೇ ರೀತಿ ಪಾರ್ಟಿಯನ್ನ ಆಯೋಜಿಸಿ ಅದರಲ್ಲಿ ಡ್ರಗ್ ಬಳಕೆಯಾಗಿರುವ ಬಗ್ಗೆ ಈ ಹಿಂದೆ ಮಾಹಿತಿ ಬಂದಿತ್ತು . ಅಂದು ಆ ಆಯೋಜಕ ತಪ್ಪಿಸಿಕೊಂಡಿದ್ದ.  ಸದ್ಯ ಅದೇ ಆಯೋಜಕ ಪಾರ್ಟಿಯನ್ನ ಆಯೋಜಿಸಿದ ಹಿನ್ನಲೆ ಸಿಸಿಬಿ ದಾಳಿ ನಡೆಸಿತ್ತು . ಇನ್ನು ಈ ಪಾರ್ಟಿಗೆ ಎಂಟ್ರಿ ಫೀಸ್ ಎಂದು ಯುವಕರಿಗೆ 400 ರೂಪಾಯಿ ಯುವತಿಯರಿಗೆ 300 ರೂಪಾಯಿ ಚಾರ್ಜ್ ಮಾಡಿದ್ದ. ಇನ್ನು ದಾಳಿ‌ ನಡೆದಂತಹ ಸಂಧರ್ಭದಲ್ಲಿ ಯಾವುದೆ ಡ್ರಗ್ ಪತ್ತೆಯಾಗಿಲ್ಲ. ಆದರೆ ಡ್ರಗ್ ಸೇವನೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಹೀಗಾಗಿ ಅವರುಗಳನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.ಇನ್ನು ಸಿಸಿಬಿ ಅಧಿಕಾರಿಗಳು ಯುವಕ ಯುವತಿಯರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಾಗೆ ಆರ್ಗನೈಝರ್ ಗಾಗಿ ಸಿಸಿಬಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಏಪ್ರಿಲ್ 10 ರಿಂದ 18+ ವಯಸ್ಸಿನವರಿಗೆ ಮುನ್ನೆಚ್ಚರಿಕೆ ಡೋಸ್