ಅನೈತಿಕ ಸಂಬಂಧ ಬಾಲಕನ ಹತ್ಯೆ

Webdunia
ಬುಧವಾರ, 28 ಸೆಪ್ಟಂಬರ್ 2022 (15:50 IST)

ನಿಪ್ಪಾಣಿ ತಾಲ್ಲೂಕಿನ ನಾಯಿಂಗ್ಲಜ ಗ್ರಾಮದ ವಾಶಪ್ಪ ಎನ್ನುವವರು ತಮ್ಮ 12 ವರ್ಷದ ಒಬ್ಬನೇ ಪುತ್ರನನ್ನು ತಂಗಿಯ ಮನೆಯಲ್ಲಿ ಓದಲು ಬಿಟ್ಟಿದ್ದರು. ವಾಶಪ್ಪನ ಸಹೋದರಿಯ ಊರಾದ ಹೊಸೂರಿನಲ್ಲಿ ಬಾಲಕ ಶಾಲೆಗೆ ಹೋಗುತ್ತಿದ್ದ. ಇದೇ ಗ್ರಾಮದ ನೂರ್‌ಅಹಮದ್‌, ಬಾಲಕ ವಾಸವಿದ್ದ ಕುಟುಂಬದ ಮಹಿಳೆಹೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಳ್ಳಲು ಯತ್ನ ನಡೆಸಿದ್ದ. ಇದು ಸಾಧ್ಯವಾಗದ ಕಾರಣ, ಮಹಿಳೆ ಮೇಲೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ಬಾಲಕನನ್ನು ಕೊಲೆ ಮಾಡಿದ್ದಾನೆ ಎಂದು ಎಸ್ಪಿ ತಿಳಿಸಿದರು.

ಸೆ.17ರಂದು ಸೈಕಲ್‌ ಮೇಲೆ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕನನ್ನು ನೂರ್‌ ಅಹಮದ್‌ ಅ‍ಪಹರಿಸಿದ್ದ. ಗಬ್ಬಿನ ಗದ್ದೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಇಡೀ ದಿನ ಬಾಲಕನ ಶವ, ಸೈಕಲ್‌ ಹಾಗೂ ಶಾಲಾ ಬ್ಯಾಗನ್ನು ಹೊಲದಲ್ಲೇ ಮುಚ್ಚಿಟ್ಟಿದ್ದ. ಮಾರನೆಯ ದಿನ ತನ್ನ ಸ್ನೇಹಿತ ಹಣಮಂತನಿಗೆ ವಿಷಯ ತಿಳಿಸಿದ್ದ.

ಇಬ್ಬರೂ ಸೇರಿಕೊಂಡು ಕುಡಗೋಲಿನಿಂದ ಬಾಲಕನ ತಲೆ ಕತ್ತರಿಸಿ, ಮೈಮೇಲಿನ ಬಟ್ಟೆ ತೆಗೆದಿದ್ದರು. ತಲೆಯನ್ನು ಒಂದು ಕಡೆ, ದೇಹವನ್ನು ಇನ್ನೊಂದು ಕಡೆ ನದಿಗೆ ಎಸೆದಿದ್ದರು. ಸೈಕಲ್‌ ಹಾಗೂ ಶಾಲಾ ಬ್ಯಾಗನ್ನು ಬೇರೆಬೇರೆ ಬಾವಿಗಳಿಗೆ ಹಾಕಿದ್ದರು. ಯಾರಿಂದಲೂ ಗುರುತಿಸಲು ಆಗದಂತೆ ಸಾಕ್ಷ್ಯ ನಾಶ ಮಾಡಿದ್ದರು ಎಂದು ಡಾ.ಸಂಜೀವ ಮಾಹಿತಿ ನೀಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿಗಿಂತ ಮೊದಲು ನೆಹರೂ ಕುಟುಂಬದಲ್ಲಿ ನಡೆಯುತ್ತಿದೆ ಮದುವೆ: ಯಾರದ್ದು ನೋಡಿ

ಅಕ್ರಮ ವಾಸಿಗಳಿಗೆ ಕನ್ನಡಿಗರ ಹಣದಲ್ಲಿ ಮನೆ ಎಂದರೆ ಏನು ಅರ್ಥ: ಸಿಟಿ ರವಿ ಕಿಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಕೋಗಿಲು ಲೇಔಟ್ ಮುಸ್ಲಿಮರ ಮನೆ ತೆರವಿಗೆ ಪಾಕಿಸ್ತಾನ ಎಂಟ್ರಿ: ಶತ್ರು ರಾಷ್ಟ್ರಕ್ಕೆ ಭಾರತದ ತಿರುಗೇಟು

ಮುಂದಿನ ಸುದ್ದಿ
Show comments