Select Your Language

Notifications

webdunia
webdunia
webdunia
webdunia

ಪಕ್ಕದ ಮನೆಯ ನಾಯಿ ರೇಬಿಸ್ನಿಂದ ಬಾಲಕ ಸಾವು

ಪಕ್ಕದ ಮನೆಯ ನಾಯಿ ರೇಬಿಸ್ನಿಂದ ಬಾಲಕ ಸಾವು
bangalore , ಗುರುವಾರ, 7 ಸೆಪ್ಟಂಬರ್ 2023 (14:00 IST)
ಪಕ್ಕದ ಮನೆಯ ನಾಯಿ ಕಚ್ಚಿದ್ದ ವಿಷಯವನ್ನು ಪೋಷಕರಿಂದ ಮುಚ್ಚಿಟ್ಟಿದ್ದ 14 ವರ್ಷದ ಬಾಲಕ ಒಂದೂವರೆ ತಿಂಗಳ ಬಳಿಕ ರೇಬಿಸ್ನಿಂದ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದಿದೆ. ಶಾವೇಜ್ನ ಪಕ್ಕದ ಮನೆಯ ಮಹಿಳೆಯೊಬ್ಬರು ಬೀದಿನಾಯಿಗಳನ್ನು ಸಾಕುತ್ತಾರೆ ಮತ್ತು ಆಹಾರ ನೀಡುತ್ತಾರೆ ಆ ನಾಯಿಗಳಲ್ಲಿ ಒಂದು ನಾಯಿ ಶಾವೇಜನಿಗೆ  ಕಚ್ಚಿದೆ ಎನ್ನಲಾಗಿದೆ. ಈ ಹಿಂದೆಯೂ ಈ ನಾಯಿಗಳು ಇತರರಿಗೆ ಕಚ್ಚಿವೆ.ಭಯದಿಂದ, ಸಬೆಜ್ ತನ್ನ ಕುಟುಂಬಕ್ಕೆ ಘಟನೆಯ ಬಗ್ಗೆ ಹೇಳಲಿಲ್ಲ ಮತ್ತು ನಾಲ್ಕು ದಿನಗಳ ನಂತರ ರೇಬೀಸ್ ರೋಗಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿತ್ತು ಎಂದು ಆತನ ಅಜ್ಜ ಮತ್ಲುಬ್ ಅಹ್ಮದ್ ಹೇಳಿದ್ದಾರೆ. ಕ್ರಮೇಣವಾಗಿ ಶಾವೇಜ್ ಗಾಳಿ ಮತ್ತು ನೀರನ್ನು ಕಂಡರೆ ಭಯಪಡುತ್ತಿದ್ದ, ಸದಾ ಕತ್ತಲೆಯಲ್ಲಿಯೇ ಇರುತ್ತಿದ್ದ, ಆಗಾಗ ಭಯಗೊಂಡು ಗಲಾಟೆ ಮಾಡುತ್ತಿದ್ದ ಎಂದು ಹೇಳಿದ್ದಾರೆ. ಸಬೇಜ್ ಅವರನ್ನು ದೆಹಲಿಯ ಏಮ್ಸ್‌ನ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆಂದು ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಸ್ವಾರ್ಥಕ್ಕೆ 14 ತಿಂಗಳ ಮಗುವನ್ನೇ ಕೊಂದ ತಂದೆ!?