Publish Date: Wed, 11 May 2022 (18:53 IST)
Updated Date: Wed, 11 May 2022 (19:33 IST)
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಎಲ್ಲರ ನಿದ್ದೆಗೆಡಿಸಿದ್ದ ಕರಡಿ ಕೊನೆಗೂ ಬೋನಿಗೆ ಬಿದ್ದಿದೆ..
ಚಿಕ್ಕಜೋಗಿಹಳ್ಳಿ, ಕಡಕೋಳ, ಮಡ್ಲಾನಾಯಕನಹಳ್ಳಿ, ಭೀಮಸಮುದ್ರ, ಕುರಿಹಟ್ಟಿ ಭಾಗಗಳಲ್ಲಿ ಕರಡಿ ದಿನನಿತ್ಯ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು..ಅಲ್ಲದೇ, ಚಿಕ್ಕಜೋಗಿಹಳ್ಳಿಯ ಪೆಟ್ರೋಲ್ ಬಂಕ್, ಲಕ್ಷ್ಮಣ್ ನಾಯಕ್ ಎಂಬುವರ ತೋಟದ ಬಳಿ ರಾತ್ರಿ ವೇಳೆ ಕರಡಿ ಓಡಾಡಿರುವ ವಿಡಿಯೋ ವೈರಲ್ ಆಗಿತ್ತು..ಇದೀಗ ಕೂಡ್ಲಿಗಿ ತಾಲೂಕಿನ ಕಡಕೋಳ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಕರಡಿ ಸಿಕ್ಕಿ ಬಿದ್ದಿದೆ..ಇನ್ನು ಕರಡಿಯನ್ನ ಗುಡೇಕೋಟೆ ಕರಡಿಧಾಮಕ್ಕೆ ಸಾಗಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.