Publish Date: Sat, 13 May 2023 (07:55 IST)
Updated Date: Sat, 13 May 2023 (08:49 IST)
ಹುಬ್ಬಳ್ಳಿ : ಹುಬ್ಬಳ್ಳಿಯಿಂದ ಶಿಗ್ಗಾವಿಗೆ ತೆರಳುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದರ್ಶ ನಗರದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ನವರು ಯಾರೂ ಸಂಪರ್ಕದಲ್ಲಿ ಇಲ್ಲ. ಇವತ್ತು ಕರ್ನಾಟಕ ವಿಧಾನ ಸಭೆಯ ಫಲಿತಾಂಶದ ದಿನ ಈ ಫಲಿತಾಂಶ ಬಹಳಷ್ಟು ಮುಖ್ಯ. ರಾಜ್ಯ, ಅಭಿವೃದ್ಧಿ, ಜನರ, ರಾಜಕೀಯ ದೃಷ್ಟಿಯಿಂದ ಬಹಳಷ್ಟು ಮುಖ್ಯ.
ಮುಂದಿನ ಐದು ವರ್ಷದ ರಾಜ್ಯ ಅಭಿವೃದ್ಧಿ ಮತ್ತು ಸುರಕ್ಷಿತವಾಗಿ ನಾಡು ಮಾಡುವ ನಿಟ್ಟಿನಲ್ಲಿ ಜನ ಮತ ನೀಡಿದ್ದಾರೆಂಬ ನಂಬಿಕೆಯಿದೆ. ನಮ್ಮ ಬಿಜೆಪಿ ಸ್ಪಷ್ಟ ಬಹುಮತದಿಂದ ಜಯ ಸಾಧಿಸಲಿದೆ ಎಂಬ ವಿಶ್ವಾಸವಿದೆ ಎಂದರು.