ಕಾವೇರಿ ವಿವಾದ ಇಂದು ನಿನ್ನೆಯದಲ್ಲ. ದಶಕಗಳಿಂದಲೂ ನೆನೆಗುದಿಗೆ ಬಿದ್ದಿದೆ. ಕನ್ನಡಿಗರ ಕಾವೇರಿ ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ ಎಂದು ಬಾಲಿವುಡ್ ನಟಿ ನಗ್ಮಾ ಹೇಳಿದ್ದಾರೆ.
ಚೆನ್ನೈ ನಗರದಲ್ಲಿ ಮಳೆಯಿಂದಾಗಿ ಕಂಗಾಲಾಗಿದ್ದಾಗ ಕನ್ನಡಿಗರು ಸಹಾಯ ಮಾಡಿದ್ದಾರೆ. ಕನ್ನಡಿಗರ ಸಹಾಯವನ್ನು ತಮಿಳುನಾಡಿನ ಜನತೆ ಮತ್ತು ತಮಿಳುನಾಡು ಸರಕಾರ ಯಾವತ್ತೂ ಮರೆಯಬಾರದು ಎಂದು ಮನವಿ ಮಾಡಿದ್ದಾರೆ.
ಕನ್ನಡ ನಾಡು ನುಡಿಗಾಗಿ ನಡೆಯುವ ಪ್ರತಿಭಟನೆಗಳಿಗೆ ಯಾವತ್ತೂ ನನ್ನ ಬೆಂಬಲವಿದೆ. ಉಭಯ ರಾಜ್ಯಗಳ ಸರಕಾರಗಳು ಜನತೆಯ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಮುಂಬರುವ ದಿನಗಳಲ್ಲಿ ಅಗತ್ಯವಾದಲ್ಲಿ ನಾನು ನಿಮ್ಮೊಂದಿಗೆ ಹೋರಾಟಕ್ಕಿಳಿಯುತ್ತೇನೆ ಎಂದು ಬಾಲಿವುಡ್ ನಟಿ ನಗ್ಮಾ ಹೇಳಿಕೆ ನೀಡಿರುವುದು ಕಾವೇರಿ ಹೋರಾಟಗಾರರಿಗೆ ಮತ್ತಷ್ಟು ನೈತಿಕ ಬೆಂಬಲ ದೊರೆತಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ