Select Your Language

Notifications

webdunia
webdunia
webdunia
webdunia

ಪೂಂಚ್‌ನಲ್ಲಿ ಕದನವಿರಾಮ ಉಲ್ಲಂಘಿಸಿದ ಪಾಕ್‌ನಿಂದ ಗುಂಡಿನ ದಾಳಿ

ಪೂಂಚ್‌ನಲ್ಲಿ ಕದನವಿರಾಮ ಉಲ್ಲಂಘಿಸಿದ ಪಾಕ್‌ನಿಂದ  ಗುಂಡಿನ ದಾಳಿ
ಜಮ್ಮು: , ಮಂಗಳವಾರ, 6 ಸೆಪ್ಟಂಬರ್ 2016 (15:44 IST)
ಪಾಕಿಸ್ತಾನ ಸೇನಾಪಡೆಗಳು ಭಾರತದ ಮುಂಚೂಣಿ ಶಿಬಿರಗಳ ಮೇಲೆ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ಮತ್ತು ಮೋರ್ಟಾರ್  ಶೆಲ್ ದಾಳಿ ಮಾಡುವ ಮೂಲಕ  ಜಮ್ಮುಕಾಶ್ಮೀರದ ಪೂಂಚ್ ವಲಯದಲ್ಲಿ ಕೇವಲ ಒಂದು ವಾರದ ಅಂತರದಲ್ಲಿ ಎರಡನೇ ಬಾರಿಗೆ ಕದನವಿರಾಮ ಉಲ್ಲಂಘಿಸಿದೆ.  ಪೂಂಚ್ ವಲಯದಲ್ಲಿ  ಭಾರತದ ಸೇನಾ ಶಿಬಿರಗಳ ಮೇಲೆ ಮಧ್ಯರಾತ್ರಿಯಿಂದ ಅಪ್ರಚೋದಿತ, ಎಡೆಬಿಡದ ಗುಂಡಿನ ದಾಳಿ ನಡೆಸಿತೆಂದು ರಕ್ಷಣಾ ವಕ್ತಾರ ತಿಳಿಸಿದರು.
 
ನಮ್ಮ ಪಡೆಗಳು ಸೂಕ್ತ ಪ್ರತಿರೋಧ ತೋರಿದ್ದು, ನಮ್ಮ ಪಡೆಗಳಿಗೆ ಯಾವುದೇ ಸಾವು, ನೋವು ಹಾನಿ ಸಂಭವಿಸಿಲ್ಲ. ಗುಂಡಿನ ಚಕಮಕಿ ಇನ್ನೂ ಮುಂದುವರಿದಿದೆ ಎಂದು ವಕ್ತಾರ ಹೇಳಿದ್ದಾರೆ.

 ಇಂದಿನ ಕದನವಿರಾಮ ಉಲ್ಲಂಘನೆಯು ಒಂದು ವಾರದ ಅಂತರದಲ್ಲಿ ಎರಡನೆಯದು. ಸೆ. 2ರಂದು ಜಮ್ಮು ಜಿಲ್ಲೆಯ ಅಕ್ನೂರ್ ವಲಯದಲ್ಲಿ ಪಾಕಿಸ್ತಾನ ಪಡೆಗಳು ಎಲ್‌ಒಸಿಯ ಮುಂಚೂಣಿ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಿ ಕದನವಿರಾಮ ಉಲ್ಲಂಘಿಸಿತ್ತು. 

Share this Story:

Follow Webdunia kannada

ಮುಂದಿನ ಸುದ್ದಿ

ಜೀವಭಯವಿರುವವರಿಗೆ ರಕ್ಷಣೆ ನೀಡಲು ಬದ್ಧ: ಜಿ.ಪರಮೇಶ್ವರ್