Select Your Language

Notifications

webdunia
webdunia
webdunia
Sunday, 13 April 2025
webdunia

ಈಶ್ವರಪ್ಪ ಬಂಧಿಸುವವರೆಗೂ ಶವ ತೆಗೆಯಲ್ಲ: ಗುತ್ತಿಗೆದಾರ ಸಂತೋಷ್‌ ಸೋದರ ಪಟ್ಟು

santhosh patil ks eshwarappa udupi
bengaluru , ಬುಧವಾರ, 13 ಏಪ್ರಿಲ್ 2022 (14:17 IST)
ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್‌ ಈಶ್ವರಪ್ಪ ಅವರನ್ನು ಬಂಧಿಸುವವರೆಗೂ ನನ್ನ ತಮ್ಮನ ಶವ ತೆಗೆಯುವುದಿಲ್ಲ ಎಂದು ಗುತ್ತಿಗೆದಾರ ಸಂತೋಷ್‌ ಪಾಟೀ
ಲ್‌ ಅವರ ಸೋದರ ಪಟ್ಟು ಹಿಡಿದಿದ್ದಾರೆ.
ಶೇ.೪೦ರಷ್ಟು ಕಮಿಷನ್‌ ಗೆ ಪಟ್ಟು ಹಿಡಿದಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಶವ ಉಡುಪಿಯ ಲಾಡ್ಜ್‌ ನಲ್ಲಿ ಇನ್ನೂ ಇದೆ.
ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡು ಎರಡು ದಿನಗಳು ಕಳೆದಿದ್ದು, ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಮತ್ತು ಅವರನ್ನು ಸಚಿವ ಸಂಪುಟದಿಂದ ಕೂಡಲೇ ವಜಾ ಮಾಡಬೇಕು ಎಂದು ಅವರ ಸೋದರ ಪ್ರಶಾಂತ್‌ ಪಾಟೀಲ್‌ ಆಗ್ರಹಿಸಿದ್ದಾರೆ.
ನನ್ನ ತಮ್ಮನ ಬಿಲ್‌ ಕೊಡದೇ ಇಲಾಖೆಯವರು ಸತಾಯಿಸಿದ್ದಾರೆ. ಈಗ ನಾವು ಸರಕಾರದ ಸಹಕಾರ ಕೇಳುತ್ತಿದ್ದೇವೆ. ನನ್ನ ತಮ್ಮನ ಸಾವಿಗೆ ಕಾರಣರಾದ ಸಚಿವ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ದಿಲ್ಲಿಯಲ್ಲಿ ಕೈ ಪ್ರತಿಭಟನೆ, ಅರೆಸ್ಟ್‌