Select Your Language

Notifications

webdunia
webdunia
webdunia
webdunia

ಅನ್ ಲಾಕ್ ಬೆನ್ನಲ್ಲೇ ಬಿಎಂಟಿಸಿ ಪ್ರಯಾಣ ದರ ಏರಿಕೆ?

ಅನ್ ಲಾಕ್ ಬೆನ್ನಲ್ಲೇ ಬಿಎಂಟಿಸಿ ಪ್ರಯಾಣ ದರ ಏರಿಕೆ?
bengaluru , ಸೋಮವಾರ, 5 ಜುಲೈ 2021 (14:58 IST)
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಸೋಮವಾರ ಪ್ರಯಾಣಿಕರ ಟಿಕೆಟ್ ಹೆಚ್ಚಳ ಕುರಿತು ಸುಳಿವು ನೀಡಿದ್ದು, ಈ ವಾರದೊಳಗೆ ಸರ್ಕಾರಕ್ಕೆ ದರ ಏರಿಕೆ ಕುರಿತು ಮತ್ತೊಂದು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಜನವರಿಯಲ್ಲಿ ಬಿಎಂಸಿಟಿ ಪ್ರಯಾಣ ದರವನ್ನು ಶೇ.20ರಷ್ಟು ಏರಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಶೇ.20ರಷ್ಟು ದರ ಏರಿಕೆಗೆ ಬಿಎಂಟಿಸಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.
ಸಾರಿಗೆ ಸಂಸ್ಥೆ ಭಾರೀ ನಷ್ಟದ ಹಿನ್ನೆಲೆಯಲ್ಲಿ ಮತ್ತೆ ದರ ಹೆಚ್ಚಳ ಮಾಡುವಂತೆ ಸರಕಅರಕ್ಕೆ ಮತ್ತೊಂದು ಪ್ರಸ್ತಾವನೆ ಸಲ್ಲಿಸುತ್ತೇವೆ. ಅನ್ ಲಾಕ್ ಆದ ಬಳಿಕ ಎಲ್ಲಾ ಬಸ್ ಕಾರ್ಯಾಚರಣೆಗೆ ಇಳಿದಿದ್ದು, ನಿರ್ವಹಣೆ ವೆಚ್ಚ ಇನ್ನಷ್ಟು ಹೆಚ್ಚಳ ಆಗಿದೆ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಬಣ್ಣ ಬಯಲು ಮಾಡುತ್ತೇನೆ: ಎಚ್.ಡಿ. ಕುಮಾರಸ್ವಾಮಿ