Select Your Language

Notifications

webdunia
webdunia
webdunia
webdunia

ಶಾಕಿಂಗ್ ಮಾಹಿತಿ ಹೊರಹಾಕಿದ ಬಿಎಂಟಿಸಿ ಸಂಸ್ಥೆ..!

bmtc

geetha

bangalore , ಶನಿವಾರ, 13 ಜನವರಿ 2024 (15:23 IST)
ಬೆಂಗಳೂರು- ಬಿಎಂಟಿಸಿ ಬಸ್ ಅಪಘಾತ ಪ್ರಕರಣಗಳಲ್ಲಿ ಬೈಕ್ ಸವಾರರದ್ದೆ ಹೆಚ್ಚು ಪ್ರಕರಣ ದಾಖಲಾಗಿದೆ.ಬೈಕ್ ಸವಾರರಿಂದಲೇ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಅಪಘಾತಗಳ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ.ಆರಟಿಓ ಅಧಿಕಾರಿಗಳ ನಿರ್ಲಕ್ಷದಿಂದಲೇ ಅಪಘಾತ ಸಂಖ್ಯೆಗಳು ಹೆಚ್ಚಳವಾಗಿದೆ ಎಂದು ಬಿಎಂಟಿಸಿ ಮುಖ್ಯ ಸಂಚಾರ ಮುಖ್ಯಸ್ಥರಾದ ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.
 
ಚಾಲನ ತರಬೇತಿ ನೀಡದೆ ಲೈಸನ್ಸ್ ನೀಡಲಾಗುತ್ತಿದೆ ಎಂದು ಆರಟಿಓ ವಿರುದ್ಧ ಬಿಎಂಟಿಸಿ ಗಂಭೀರ ಆರೋಪ ಮಾಡಿದೆ.
ಬಿಎಂಟಿಸಿಗೆ ಬೈಕ್ ಸವಾರರಿಂದಲೇ ಕಳಂಕ ಬರ್ತಿದೆ ಎಂದು ಬಿಎಂಟಿಸಿ ಆರೋಪ ಮಾಡಿದೆ.ವಿಲಿಂಗ್ ಹಾಗೂ ಲೈಸನ್ಸ್ ಇಲ್ಲದೆ ಬೈಕ್ ಓಡಿಸುವರ ಮೇಲೆ ಪೊಲೀಸರು ನಿಗಾ ಇಡಬೇಕು .ಅಕ್ಟೋಬರ್ ಒಂದೇ ತಿಂಗಳಲ್ಲಿ ಹತ್ತು ಬಿಎಂಟಿಸಿ ಹಾಗೂ ಬೈಕ್ ಅಪಘಾತ ಪ್ರಕರಣಗಳು ದಾಖಲಾಗಿವೆ.ಅಪಘಾತದಲ್ಲಿ 10 ಜನ ಬೈಕ್ ಸವಾರರು ಒಂದೇ ತಿಂಗಳಲ್ಲಿ ಮೃತಪಟ್ಟಿದ್ದಾರೆ.

ಆರಟಿಓಗಳು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೈಕ್ ಸವಾರಿಗೆ ಜಾಗೃತಿ ಮೂಡಿಸಬೇಕು.ನಗರದಲ್ಲಿನ ಬಿಎಂಟಿಸಿ ಬಸ್ ಅಪಘಾತ ಪ್ರಕರಣಗಳನ್ನು ಕಡಿಮೆಗೊಳಿಸುವ ಸಲುವಾಗಿ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ.ಈಗಾಗಲೇ ಬಿಎಂಟಿಸಿ ಚಾಲಕರಿಗೆ ಪೊಲೀಸರಿಂದ ಹಾಗೂ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ .ಹಂತ ಹಂತವಾಗಿ ಬಿಎಂಟಿಸಿ ಎಲ್ಲಾ ಚಾಲಕರಿಗೂ ಕೂಡ ತರಬೇತಿ ನೀಡಲಾಗುತ್ತದೆ ಬಿಎಂಟಿಸಿ ಮುಖ್ಯ ಸಂಚಾರ ಮುಖ್ಯಸ್ಥರಾದ ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.
 
ಬಿಎಂಟಿಸಿ ಏಳು ವಲಯದಲ್ಲಿ ಪ್ರತಿ ಶನಿವಾರ 50 ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ .ಬಿಎಂಟಿಸಿಯಲ್ಲಿ 50 ಡಿಪೋಗಳಿದ್ದು, ಪ್ರತಿಯೊಂದು ಡಿಪೋದಿಂದ ಪ್ರತಿ ಶನಿವಾರ ಒಬ್ಬರಂತೆ ಒಟ್ಟು 50 ಜನರಿಗೆ  ತರಬೇತಿ ನೀಡಲಾಗುತ್ತೆ.ಈಗಾಗಲೇ 1,400 ಚಾಲಕರಿಗೆ ತರಬೇತಿ ನೀಡಲಾಗಿದೆ .ನಿಂತಿರುವ ಬಸ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರರು ಸಾವಿಗೀಡಾಗುತ್ತಿದ್ದಾರೆ .ಇನ್ನು ಸಿಸಿಟಿವಿ ದೃಶ್ಯಗಗಳನ್ನ ಬಿಎಂಟಿಸಿ ಬಿಡುಗಡೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಪ್ರೇಮಿಗಳಿಗೆ ಬಿಎಂಟಿಸಿಯಿಂದ ಗುಡ್ ನ್ಯೂಸ್