Webdunia - Bharat's app for daily news and videos

Install App

ಸಾರಿಗೆ ನೌಕರರ ಮುಷ್ಕರದಿಂದ ಬಿಎಂಟಿಸಿ, ಕೆಎಸ್ ಆರ್ ಟಿಸಿಗೆ ಕೋಟಿ ಕೋಟಿ ನಷ್ಟ

Webdunia
ಭಾನುವಾರ, 13 ಡಿಸೆಂಬರ್ 2020 (10:13 IST)
ಬೆಂಗಳೂರು: ಸರ್ಕಾರದ ವಿರುದ್ಧ ಸಾರಿಗೆ ನೌಕರರು ಸಿಡಿದೆದ್ದು ಮುಷ್ಕರ ಮಾಡಿದ್ದರಿಂದ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದೆ.


ಕಳೆದ ಎರಡು ದಿನದಿಂದ ಸರಿಯಾಗಿ ಬಸ್ ಸಂಚಾರವಾಗುತ್ತಿಲ್ಲ. ಇದರಿಂದಾಗಿ ಕೆಎಸ್ ಆರ್ ಟಿಸಿಗೆ 13 ಕೋಟಿ ರೂ. ಮತ್ತು ಬಿಎಂಟಿಸಿಗೆ 7 ಕೋಟಿ ರೂ. ನಷ್ಟವಾಗಿದೆ. ಇಂದು ಪೊಲೀಸ್ ಭದ್ರತೆಯಲ್ಲಿ 50 ಕ್ಕೂ ಹೆಚ್ಚು ಬಸ್ ಗಳು ನಗರದಲ್ಲಿ ಸಂಚಾರ ನಡೆಸಿವೆ. ಬಸ್ ಸಂಚಾರವಿಲ್ಲದೇ ಸಾರ್ವಜನಿಕರು ತೀವ್ರವಾಗಿ ಪರದಾಡುತ್ತಿದ್ದಾರೆ. ಈ ನಡುವೆ ನಿನ್ನೆ ಸರ್ಕಾರಿ ಬಸ್ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಖಾಸಗಿ ಬಸ್ ಗಳನ್ನು ಬಿಡುವ ಎಚ್ಚರಿಕೆ ನೀಡಿದ್ದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಇಂದು ಕೊಂಚ ಮೃದು ಧೋರಣೆ ತಳೆದಿದ್ದು, ಬಸ್ ನೌಕರರು ನಮ್ಮ ಕುಟುಂಬ ಸದಸ್ಯರಿದ್ದಂತೆ. ಸದ್ಯಕ್ಕೆ ಅವರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಇಂದಿನಿಂದ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಮನವೊಲಿಕೆ ಮಾಡಲಾಗುವುದು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ ಗೃಹಪ್ರವೇಶಕ್ಕೆ ಗಣಹೋಮ, ಪೂಜೆ ಯಾಕೆ ಮಾಡಿದ್ರು: ಬಲಪಂಥೀಯ ಟಾಂಗ್

ಅಯ್ಯೋ ಗಣೇಶ… ಗಣೇಶನ ಮೂರ್ತಿ ಎದುರು ಇಟ್ಟುಕೊಂಡು ಯುವಕರ ಬಿಂದಾಸ್ ಡ್ರಿಂಕ್ಸ್ Video

ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದು ವೃದ್ಧ ಮಹಿಳೆ ಮಾಂಗಲ್ಯ ಎದುರಿಸಲು ಬಂದಾಗ ನಡೆಯಿತು ಪವಾಡ Video

ರಾಜ್ಯದಲ್ಲಿ ಕ್ಷೀಣಿಸಿದ ಮುಂಗಾರು ಮಳೆ: ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆ

ಪ್ರೀತಿಸಿ ಮದುವೆಯಾದ ಪತ್ನಿಯ ರುಂಡ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ ಪತಿ ಪೊಲೀಸ್ ವಾಹನದಿಂದ ಜಿಗಿದು ಆತ್ಮಹತ್ಯೆ

ಮುಂದಿನ ಸುದ್ದಿ
Show comments