ಬೆಂಗಳೂರು: ನಂತರದ ನಂತರದ ಪಿಂಕ್ ಮಾರ್ಗದ ಟ್ಯಾನರಿ ರಸ್ತೆಯ ನಮ್ಮ ಮೆಟ್ರೋ ಕಾಮಗಾರಿಯ ಸ್ಥಳದಲ್ಲಿ ಆದ ಅನಾಹುತದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಬಿ.ಎಂ.ಆರ್.ಸಿ.ಎಲ್ ಮೂಲಕ ತೆರದ ಬಾವಿ ಮುಚ್ಚಲು ಲಾರಿಗಳ ಮೂಲಕ ಮಣ್ಣು ತರಿಸಿ ಹಾಕಲಾಗುತ್ತಿದೆ. 15 ಹೆಚ್ಚು ಹೆಚ್ಚು ಪೋಲಿಸರು/ಕಾರ್ಮಿಕರು ಬಾವಿ ಮುಚ್ಚಲು ಹರಸಾಹಸ ಪಡುತ್ತಿದ್ದಾರೆ. ಎಷ್ಟು ಮಣ್ಣು ಸುರಿದರೂ ಬಾವಿ ಮುಚ್ಚಲು ಇಲ್ಲಿಯವರೆಗೆ 2 ಲೋಡ್ ಮಣ್ಣು ತರಿಸಿದ ಬಿ.ಎಂ.ಆರ್.ಸಿ.ಎಲ್ ಸಂಸ್ಥೆ ಹೆಣಗಾಡುತ್ತಿದೆ.
ಬಿ.ಎಂ.ಆರ್.ಸಿ.ಎಲ್ ವಿರುದ್ಧ ಮನೆಯ ಓನರ್ ಗರಂ:
ಬಿ.ಎಂ.ಆರ್.ಸಿ.ಎಲ್ ವಿರುದ್ಧ ಮನೆಯ ಓನರ್ ಓಬಿ ಗರಂ ಆಗಿದ್ದಾರೆ, ಕಳೆದ ಒಂದು ತಿಂಗಳ ಹಿಂದೆ ಬಾವಿಯನ್ನ ಮುಚ್ಚಿದ್ದರು, ಈಗ ನೋಡಿದರೆ ಹೀಗಾಗುತ್ತಿದೆ, ಏನು ಮಾಡುವುದು ಎಂದು ತಿಳಿಯುತ್ತಿಲ್ಲ. ನಿನ್ನೆ ರಾತ್ರಿ ಮನೆ ಎಲ್ಲಾ ವೈಬ್ರೆಟ್ ಆಗಿದೆ ಎಂದು ಹುಡುಗರು ಹೇಳುತ್ತಾರೆ. ಸೋಮವಾರ ನೋಡಿದರೆ ಬಾವಿ ಕುಸಿತ ನೋಡಿ ಶಾಕ್ ಆಯ್ತು, ನಾವು ಮನೆಯಲ್ಲಿ ಇರಲು ಆಗುತ್ತಿಲ್ಲ, ಯಾವಾಗ ಮಿಷನ್ ಸೌಂಡ್ ಕೇಳುತ್ತಿದೆ ಎಂದು ದೂರಿದರು.
ನಮ್ಮ ಹುಡುಗರು ಈ ಮನೆಯಲ್ಲಿದ್ದರು, ವೈಬ್ರೆಟ್ ಆಗುತ್ತಿರುವ ಕಾರಣ ರಾತ್ರಿ ಮನೆಯಿಂದ ಹೊರ ಬಂದರು, ನಾವು ಇನ್ನು ಮುಂದೆ ಈ ಮನೆಯಲ್ಲಿ ಇರೋಲ್ಲ, ಬಿ.ಎಂ.ಆರ್.ಸಿ.ಎಲ್ ನವರೇ ನಮ್ಮ ಮನೆಯನ್ನು ಖರೀದಿಸಬೇಕು. ಯಾರಿಗಾದರೂ ಹೆಚ್ಚು ಕಡಿಮೆಯಾದರೆ ಏನು ಮಾಡುವುದು ಎಂದು ಬೀ ಆತಂಕ.