Select Your Language

Notifications

webdunia
webdunia
webdunia
webdunia

ನಗ್ನ ಫೋಟೋ ಕಳಿಸುವಂತೆ ಮಹಿಳೆಗೆ ಬ್ಲ್ಯಾಕ್ಮೇಲ್!

ನಗ್ನ ಫೋಟೋ ಕಳಿಸುವಂತೆ ಮಹಿಳೆಗೆ ಬ್ಲ್ಯಾಕ್ಮೇಲ್!
ಮಂಗಳೂರು , ಮಂಗಳವಾರ, 31 ಆಗಸ್ಟ್ 2021 (10:25 IST)
ಮಂಗಳೂರು: ಮಹಿಳೆಯೊಬ್ಬರ ಖಾಸಗಿ ಚಿತ್ರಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಪುತ್ತಿಗೆ ಗ್ರಾಮದ ನಿವಾಸಿ ವಿಜಯ ಗೌಡ (33) ಬಂಧಿತ ಆರೋಪಿ. ಆರೋಪಿ ಮಹಿಳೆಯ ಮನೆಗೆ ಕೂಲಿ ಕೆಲಸಕ್ಕೆ ಬರುತ್ತಿದ್ದು, ಈ ಸಂದರ್ಭ ಮಹಿಳೆಯ ಮೊಬೈಲ್ ನಂಬರ್ ಪಡೆದಿದ್ದ. ಇದಾದ ನಂತರ ಮಹಿಳೆಯ ಜತೆ ಸಲುಗೆ ಬೆಳೆಸಿದ್ದ ಆರೋಪಿ ಮಹಿಳೆಯ ಬಳಿ ಆಕೆಯ ಖಾಸಗಿ ಪೋಟೋ ಕಳುಹಿಸುವಂತೆ ಒತ್ತಡ ಹೇರಿದ್ದಾನೆ. ಇದಕ್ಕೆ ಮಹಿಳೆ ನಿರಾಕರಣೆ ಮಾಡಿದಾಗ ‘ನಿನ್ನ ಜತೆ ಅಕ್ರಮ ಸಂಬಂಧವಿದೆ’ ಎಂದು ಸುದ್ದಿ ಹಬ್ಬಿಸುವುದಾಗಿ ಬೆದರಿಸಿದ್ದಾನೆ. ಇದಕ್ಕೆ ಬೆದರಿದ ಮಹಿಳೆ ಆತನಿಗೆ ನಗ್ನಚಿತ್ರಗಳನ್ನು ಕಳುಹಿಸಿದ್ದು ಅದೇ ಪೋಟೋಗಳನ್ನು ಮುಂದಿಟ್ಟು ಯುವಕ ಬ್ಲ್ಯಾಕ್ಮೇಲ್ ಆರಂಭಿಸಿದ್ದಾನೆ.
‘ನೀನು ನನ್ನ ಜತೆ ಲೈಂಗಿಕ ಕ್ರಿಯೆಗೆ ಸಹಕರಿಸಬೇಕು. ಇಲ್ಲದಿದ್ದರೆ ನಿನ್ನ ಕುಟುಂಬ ಸದಸ್ಯರಿಗೆ, ಊರಿನವರಿಗೆ ವಿಷಯ ತಿಳಿಸುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿಯಬಿಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೇ ತಾನು ಕೇಳಿದಷ್ಟು ಹಣವನ್ನೂ ಕೊಡಬೇಕು ಎಂದು ಬೆದರಿಸಿದ್ದಾನೆ. ಇದರಿಂದ ಆತಂಕಕ್ಕೊಳಗಾದ ಮಹಿಳೆ ಎರಡು ಬಾರಿ ಹಣವನ್ನು ನೀಡಿದ್ದಾರೆ. ಆದರೂ ಆರೋಪಿ ತನ್ನ ಚಾಳಿ ಬಿಡದೆ ಮತ್ತೆ ಮತ್ತೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ಹೀಗಾಗಿ ಆರೋಪಿ ವಿಜಯ್ ಗೌಡನ ವಿಕೃತತೆಯಿಂದ ಮಹಿಳೆ ಬೇಸತ್ತು ಮೂಡುಬಿದಿರೆ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಮೂಡುಬಿದಿರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ವಿಜಯ್ ಗೌಡ ಮತ್ತು ಸಂತ್ರಸ್ತ ಮಹಿಳೆ ಇಬ್ಬರಿಗೂ ಪ್ರತ್ಯೇಕ ಮದುವೆಯೂ ಆಗಿದೆ ಎಂದು ತಿಳಿದು ಬಂದಿದೆ.
ಡಿಜಿಟಲ್ ತಂತ್ರಜ್ಞಾನ ಬಗ್ಗೆ ಎಚ್ಚರ
ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಯಾರೇ ಆದರೂ ಮೊಬೈಲ್ ಸೇರಿದಂತೆ ಡಿಜಿಟಲ್ ತಂತ್ರಜ್ಞಾನ, ಮಾಧ್ಯಮ ಬಳಕೆ ಮಾಡುವಾಗ ಎಚ್ಚರ ವಹಿಸಿ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಕಿವಿಮಾತು ಹೇಳಿದ್ದಾರೆ. ಯಾವುದೇ ವ್ಯಕ್ತಿಯ ಜತೆ ನಿಮ್ಮ ಖಾಸಗಿ ಪೋಟೋ, ವಿಡಿಯೊ, ಆಡಿಯೊ ಹಂಚಬೇಡಿ. ಮೊಬೈಲ್ ರಿಚಾರ್ಜ್, ರಿಪೇರಿ ಕೊಡುವಾಗಲೂ ಎಚ್ಚರವಹಿಸಿ. ಈ ಹಿಂದೆಯೂ ಅನೇಕ ದೂರುಗಳು ಬಂದಿದೆ. ಯಾರೇ ಆದರೂ ಹಣ ಅಥವಾ ಯಾವುದೇ ವಿಚಾರದಲ್ಲಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಹೇಳಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಅಪಘಾತದಲ್ಲಿ ಶಾಸಕರ ಪುತ್ರ ಸೇರಿ 7 ಸಾವು