Publish Date: Sat, 25 Jul 2026 (16:55 IST)
Updated Date: Sat, 25 Jul 2026 (16:58 IST)
ಬೆಂಗಳೂರು: ಫ್ರೀಡಂ ಪಾರ್ಕ್ ನಲ್ಲಿ ಉಮರ್ ಖಾಲಿದ್ ಚಿತ್ರ ಹಿಡಿದಿದ್ದರ ಬಗ್ಗೆ ಕೇಳಿದಾಗ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅದರಲ್ಲಿ ತಪ್ಪೇನಿದೆ ಎಂದು ಮರು ಪ್ರಶ್ನೆ ಮಾಡಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಕೆ ಹರಿಪ್ರಸಾದ್ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಬಿಜೆಪಿಯವರು ನಕಲಿ ದೇಶಭಕ್ತರು. ಮಕ್ಕಳನ್ನು ದೇಶದ್ರೋಹಿಗಳು ಎನ್ನುವ ಮೋದಿ ಸರ್ಕಾರ ಉತ್ತರ ನೀಡಬೇಕು ಎಂದಿದ್ದಾರೆ.
ಈ ವೇಳೆ ಪತ್ರಕರ್ತರು ಫ್ರೀಡಂ ಪಾರ್ಕ್ ನಲ್ಲಿ ಉಗ್ರ ಉಮರ್ ಖಾಲಿದ್ ಪರ ಪೋಸ್ಟರ್ ಹಿಡಿದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದನ್ನು ಸಮರ್ಥಿಸಿಕೊಂಡ ಅವರು “ಉಮರ್ ಖಾಲಿದ್ ತಪ್ಪೇನಿದೆ? ಆತ ಐದು ವರ್ಷಗಳಿಂದ ಜೈಲಲ್ಲಿದ್ದು ಈವರೆಗೂ ಅವರ ವಿರುದ್ಧ ಯಾಕೆ ಎಫ್ಐಆರ್ ಆಗಿಲ್ಲ? ನಮ್ಮ ಕಾರ್ಯಕರ್ತರು ಒಂದು ಮೊಟ್ಟೆ ಹೊಡೆದಿದ್ದಕ್ಕೆ ಎಫ್ಐಆರ್ ಆಗುತ್ತದೆ. ಉಮರ್ ಖಾಲಿದ್ ವಿರುದ್ಧ ಚಾರ್ಜ್ ಶೀಟ್ ಹಾಕಿ. ನ್ಯಾಯಾಲಯ ತೀರ್ಮಾನ ಮಾಡುತ್ತದೆ. ನಾಗ್ಪುರ ವಿವಿ ತೀರ್ಮಾನ ಮಾಡಲು ಸಾಧ್ಯವಿಲ್ಲ. ಯಾವುದೇ ವಿಚಾರಣೆ ಆಗದೇ ಆದು ವರ್ಷ ಜೈಲಲ್ಲಿ ಇಟ್ಟಿದ್ದಾರಲ್ಲ ಇದು ಪಾಕಿಸ್ತಾನವೇ? ಬಿಜೆಪಿಯವರು ಪಾಕಿಸ್ತಾನವನ್ನು ನಕಲು ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ