Publish Date: Mon, 16 Feb 2026 (12:17 IST)
Updated Date: Mon, 16 Feb 2026 (12:19 IST)
ಬೆಂಗಳೂರು: ಎಲ್ಲಾ ಧರ್ಮದವರೂ ದೇಶದಲ್ಲಿ ಇರುವಾಗ ವಂದೇ ಮಾತರಂ ಗೀತೆಯನ್ನು ಹಾಡುವುದನ್ನು ಕಡ್ಡಾಯ ಮಾಡಲಾಗದು ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರ ರಾಷ್ಟ್ರಗೀತೆ ಹಾಡುವ ಮುನ್ನ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಇದರ ಬಗ್ಗೆ ಈಗ ಬಿಕೆ ಹರಿಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.
ಜನಗಣಮನಕ್ಕಿಂತ ಮೊದಲು ವಂದೇ ಮಾತರಂ ಹಾಡಬೇಕು ಎಂದು ಕಡ್ಡಾಯ ಮಾಡುವುದು ರಾಷ್ಟ್ರಗೀತೆಗೆ ಮಾಡುವ ಅವಮಾನ. ಆರ್ ಎಸ್ಎಸ್ ನ ಗೋಳವಲ್ಕರ್ ಅವರೇ ವಂದೇ ಮಾತರಂ ಗೀತೆಯನ್ನು ವಿರೋಧಿಸಿದ್ದರು. ಒಂದೇ ದಿನವೂ ಸಂಘದಲ್ಲಿ ರಾಷ್ಟ್ರಗೀತೆ ಹಾಡಿಲ್ಲ. ಈಗ ಆರ್ ಎಸ್ಎಸ್ ನವರಿಗೆ ಬೇಕಾಗಿ ವಂದೇ ಮಾತರಂ ಕಡ್ಡಾಯಗೊಳಿಸಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಅಷ್ಟೇ ಅಲ್ಲ, ವಂದೇ ಮಾತರಂನಲ್ಲಿ ದೇವರ ಹೆಸರಿದೆ. ದೇಶದಲ್ಲಿ ಎಲ್ಲಾ ಧರ್ಮದವರಿದ್ದಾರೆ. ಹೀಗಿರುವಾಗ ವಂದೇ ಮಾತರಂ ಕಡ್ಡಾಯ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಇದು ಕೋಮುಭಾವನೆ ಕೆರಳಿಸಲು ಮಾಡಿದ್ದಾರೆ ಎಂದಿದ್ದಾರೆ.