Publish Date: Sun, 11 Jun 2023 (19:43 IST)
Updated Date: Sun, 11 Jun 2023 (18:45 IST)
ಶಕ್ತಿಯೋಜನೆಯ ಚಾಲನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕರನ್ನ ಸೈಡ್ ಲೈನ್ ಮಾಡಲಾಗಿದೆ.ಈ ಹಿಂದೆ ಸಚಿವ ಸ್ಥಾನದ ಬಗ್ಗೆ ನಾಯಕ ಹರಿಪ್ರಸಾದ್ ಅಸಮಾಧಾನಗೊಂಡಿದ್ದರು.ಬೃಹತ್ ಕಾರ್ಯಕ್ರಮದಲ್ಲಿಯೂ ಕೈ ನಾಯಕ ಹರಿಪ್ರಸಾದ್ ರನ್ನ ಸೈಡ್ ಲೈನ್ ಆಗಿದ್ದಾರೆ.ವಿಧಾನ ಪರಿಷತ್ ನಲ್ಲಿ ಆಡಳಿತ ಪಕ್ಷದ ವಿರುದ್ಧ ನಾಯಕ ಹರಿಪ್ರಸಾದ್ ಈ ಹಿಂದೆ ವಾಗ್ದಾಳಿ ನಡೆಸಿದ್ರು.ಇಂದು ಬೃಹತ್ ವೇದಿಕೆಯಲ್ಲಿ ಕೈ ಹಿರಿಯ ನಾಯಕ ಹರಿಪ್ರಸಾದ್ ಹಿಂದೆ ಉಳಿದಿದ್ದಾರೆ.
ಬಿ.ಕೆ . ಹರಿಪ್ರಸಾದ್ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದು, ಬಿ.ಕೆ. ಹರಿಪ್ರಸಾದ್ ರನ್ನ ಕಾಂಗ್ರೆಸ್ ಪಕ್ಷ ಕಡೆಗಣಿಸಿದೆ.ಇನ್ನೂ ಕಾರ್ಯಕ್ರಮದ ಉದ್ಘಾಟನೆ ಸಮಯದಲ್ಲಿ ಬಿ.ಕೆ. ಹರಿಪ್ರಸಾದ್ ದೂರದಲ್ಲೇ ಉಳಿದಿದ್ದು.ಕಾಂಗ್ರೆಸ್ ನಿಂದ ಬಿ.ಕೆ.ಹರಿಪ್ರಸಾದ್ ಬೇಸರಗೊಂಡಿದ್ದಾರೆ.