Publish Date: Fri, 03 Nov 2017 (14:08 IST)
Updated Date: Fri, 03 Nov 2017 (14:10 IST)
ಬಿಜೆಪಿ ನಾಯಕರು ಯಾತ್ರೆ ಮಾಡಿದಷ್ಟು ನಮಗೆ ಲಾಭವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪರಿವರ್ತನೆ ಯಾತ್ರೆಗೆ ಜನತೆ ಬಾರದೇ ವಿಫಲಗೊಳಿಸಿದ್ದಾರೆ. ಬಿಜೆಪಿ ಯಾತ್ರೆ ಮಾಡಿದರೆ ನಮಗೇನು ಲಾಭವೆಂದು ಕೇಳುತ್ತಿರುವುದಾಗಿ ತಿಳಿಸಿದ್ದಾರೆ.
ಯಡಿಯೂರಪ್ಪಗೆ ಈಗಾಗಲೇ ಜನತೆ ಬುದ್ದಿ ಕಲಿಸಿದ್ದಾರೆ. ಆದಾಗ್ಯೂ ಬಿಜೆಪಿ ನಾಯಕರು ಬುದ್ದಿಕಲಿಯುವ ಮನಸ್ಥಿತಿಯವರು ಎಂದು ನಾನು ಭಾವಿಸಿಲ್ಲ. ಆದರೆ, ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಿದ ನಂತರ ಬುದ್ದಿ ಕಲಿಯುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ನಿನ್ನೆ ನಡೆದ ಬಿಜೆಪಿ ಪರಿವರ್ತನೆ ಯಾತ್ರೆಗೆ 3 ಲಕ್ಷ ಜನ ಸೇರಲಿದ್ದಾರೆ ಎಂದು ಬಿಜೆಪಿಯವರು ಹೇಳಿಕೆ ನೀಡಿದ್ದರು. ಆದರೆ, ಕನಿಷ್ಠ 20 ಸಾವಿರ ಜನ ಕೂಡಾ ಸೇರಲಿಲ್ಲ. ಬಿಜೆಪಿಯ ಬಗ್ಗೆ ಜನತೆಯಲ್ಲಿ ಅಸಮಾಧಾನ ಮೂಡಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.