Publish Date: Sat, 29 Apr 2023 (13:42 IST)
Updated Date: Sat, 29 Apr 2023 (13:44 IST)
ಮೈಸೂರು : ದಕ್ಷಿಣ ಭಾರತದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಹಿಂದೆ ನಾವು ಕುಮಾರಸ್ವಾಮಿ ಅಂತಹವರ ಸಹಾಯದಿಂದ ಅಧಿಕಾರಕ್ಕೆ ಬಂದಿರೋದು.
ನೀವು ಇಲ್ಲಿ ಹೊಸದಾಗಿ ಹೇಳುವುದು ಏನೂ ಇಲ್ಲ. ಹೊಸದಾಗಿ ಹೇಳುವುದು ಏನಾದರೂ ಇದ್ದರೆ ಕಳ್ಳತನ ಮಾಡುವುದನ್ನು ಹೇಳಿಕೊಡಬೆಕು ಅಷ್ಟೆ. ನಿಮ್ಮ ತತ್ವ ಸಿದ್ಧಾಂತಗಳಿಂದ ಯಾವುದೇ ಕಾರಣಕ್ಕೂ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ಕಿಡಿಕಾರಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಬಿಜೆಪಿ ಕಸದ ತೊಟ್ಟಿಯಾಗಿದೆ. ಮೋದಿಯವರು ಕರ್ನಾಟಕಕ್ಕೆ ಬಂದಿದ್ದಾರೆ. ಭಾನುವಾರ ಮೈಸೂರಿಗೆ ಬಂದು ಕಸದ ತೊಟ್ಟಿಯಾಗಿರುವ ಕರ್ನಾಟಕ ಬಿಜೆಪಿಯನ್ನು ಸ್ವಚ್ಛಗೊಳಿಸಿ ಎಂದು ಮೋದಿಯವರಿಗೆ ಮನವಿ ಮಾಡಿದರು.