Webdunia - Bharat's app for daily news and videos

Install App

ಸಿದ್ದರಾಮಯ್ಯಗೆ ಬಿಜೆಪಿ ಟ್ವೀಟ್ ಪಾಠ

Webdunia
ಬುಧವಾರ, 25 ಜನವರಿ 2023 (16:20 IST)
ಕರ್ನಾಟಕ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತ ಕಾಲೆಳೆದುಕೊಳ್ಳುವುದು ಹೆಚ್ಚಾಗಿದೆ. ಸದ್ಯ ಕಾಂಗ್ರೆಸ್​ ವಿರುದ್ಧ ರಾಜ್ಯ ಬಿಜೆಪಿ ಘಟಕ ಟ್ವೀಟ್​ ವಾರ್​​ ಮಾಡಿದೆ. ಭಯೋತ್ಪಾದನೆ ಜೊತೆ ಕಾಂಗ್ರೆಸ್​​ಗಿರುವ ಸಂಬಂಧದ ಬಗ್ಗೆ ತಿಳಿಯಿರಿ ಎಂದು ಟ್ವೀಟ್​​ ಮೂಲಕ ಸಿದ್ದರಾಮಯ್ಯಗೆ ರಾಜ್ಯ ಬಿಜೆಪಿ ಘಟಕ ತಿರುಗೇಟು ಕೊಟ್ಟಿದೆ. ಸಿದ್ದರಾಮಯ್ಯನವರೇ, ಆ ಕಾಲದಲ್ಲಿ ನೀವಿನ್ನೂ ಕಾಂಗ್ರೆಸ್​ಗೆ ಹೋಗಿರಲಿಲ್ಲ. ಭಯೋತ್ಪಾದನೆ ಜೊತೆಗಿನ ಸಂಬಂಧದ ಬಗ್ಗೆ ಡಿಕೆಶಿ ನಿಮಗೆ ತಿಳಿಸಿರಲ್ಲ. ಹಾಗಾಗಿ ನಾವು ಈ ವಿಚಾರವನ್ನು ನಿಮಗೆ ತಿಳಿಸಬೇಕಾಯಿತು. ಬಸ್​​ನಲ್ಲಿ ಬಿಡುವು ಮಾಡಿಕೊಂಡು ಓದಿ ಜ್ಞಾನ ಸಂಪಾದಿಸಿಕೊಳ್ಳಿ ಎಂದು ಟ್ವೀಟ್​​ ಮೂಲಕ ಸಿದ್ದರಾಮಯ್ಯಗೆ ರಾಜ್ಯ ಬಿಜೆಪಿ ಘಟಕ ತಿರುಗೇಟು ಕೊಟ್ಟಿದೆ. ಭಯೋತ್ಪಾದನೆ ಜೊತೆ ಕೈ ಮಿಲಾಯಿಸಿದ ಇತಿಹಾಸ ಕಾಂಗ್ರೆಸ್ಸಿಗಿದೆ. ಕೊನೆಗೆ ಅದೇ ವಿಚಾರಕ್ಕೆ ರಾಜೀವ್ ಗಾಂಧಿ ಹತ್ಯೆಯಾಯಿತು. ಆದರೆ ಈ ರೀತಿ ಇದ್ದ ಸಂಬಂಧವನ್ನ ರಾಜೀವ್ ಗಾಂಧಿ ಅಸ್ಥಿರಗೊಳಿಸಿದರು. ರಾಜೀವ್ ಗಾಂಧಿ ಅಸ್ಥಿರಗೊಳಿಸಿದರು ಎಂಬ ಕೋಪ ಎಲ್​​ಟಿಟಿಇಗೆ ಇತ್ತು. ಶ್ರೀಲಂಕಾಗೆ ಶಾಂತಿ ಪಾಲನಾ ಪಡೆ ಕಳುಹಿಸಿದ ರಾಜೀವ್ ಗಾಂಧಿ ಭಾರತದ ಗುಪ್ತಚರ ಸಂಸ್ಥೆ ಜೊತೆ ಭಾರತೀಯ ಸೇನೆಯನ್ನೇ ಯುದ್ಧಕ್ಕಿಳಿಸಿದ್ರು. ಶ್ರೀಲಂಕಾ ಸೇನೆ ಜೊತೆ ಎಲ್‌ಟಿಟಿಇ ಯುದ್ಧ ಮಾಡಿದಾಗಲೆಲ್ಲ ಅವರಿಗೆ ಶಸ್ತ್ರಾಸ್ತ್ರ, ವೈದ್ಯಕೀಯ ನೆರವೂ ಸಿಗುತ್ತಿದುದು ಭಾರತದಲ್ಲಿಯೇ. ಅವರ ನಿತ್ಯದ ಆಗುಹೋಗುಗಳು ವರದಿಯಾಗುತ್ತಿದ್ದದ್ದು ಕಾಂಗ್ರೆಸ್​ಗೆ. ತಾವು ಈಗ ಇರುವಂಥದ್ದು ಭಯೋತ್ಪಾದನೆಯ ಲೆಕ್ಕ ಇಟ್ಟ ಪಕ್ಷದಲ್ಲಿ ಎಂದು ಬಿಜೆಪಿ ಟ್ವೀಟ್​​ ಮಾಡಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಚಲೋಗೆ ಚಾಲನೆ ನೀಡಿದ ಬಿಜೆಪಿ

ಡಾ ಸಿಎನ್ ಮಂಜುನಾಥ್ ಪ್ರಕಾರ ಹೆಣ್ಣುಮಕ್ಕಳಲ್ಲೂ ಹೃದಯಾಘಾತ ಹೆಚ್ಚಲು ಇದೇ ಕಾರಣ

ಮೋದಿ ಆರ್ ಎಸ್ಎಸ್ ಹೊಗಳಿದ್ದಕ್ಕೆ ಸಿದ್ದರಾಮಯ್ಯ ಟೀಕೆ: ನೀವು ಎಮರ್ಜೆನ್ಸಿ ಹೇರಬಹುದಾ ಎಂದ ನೆಟ್ಟಿಗರು

ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಸ್ವಾಮೀಜಿ ಚಂದ್ರಶೇಖರನಾಥ ಗುರೂಜಿ ಇನ್ನಿಲ್ಲ

ದರ್ಶನ್ ಆಂಡ್ ಗ್ಯಾಂಗ್ ಗೆ ಇಂದೂ ಇಲ್ಲ ಈ ಒಂದು ಭಾಗ್ಯ

ಮುಂದಿನ ಸುದ್ದಿ
Show comments