Webdunia - Bharat's app for daily news and videos

Install App

ಸಿಎಂ & ಗೃಹ ಸಚಿವರ ವಿರುದ್ಧ `ಕೈ' ಟ್ವೀಟ್‌

Webdunia
ಬುಧವಾರ, 25 ಜನವರಿ 2023 (16:02 IST)
ಪಿಎಸ್‌ಐ ಅಕ್ರಮ ಪ್ರಕರಣವು ದಿನದಿಂದ ದಿನಕ್ಕೆ ಒಂದಲ್ಲ ಒಂದು ತಿರುವು ಪಡೆದುಕೊಳ್ಳುತ್ತಿದೆ. ಇದೇ ವೇಳೆ ಪಿಎಸ್‌ಐ ಅಕ್ರಮ ಮುಚ್ಚಿಹಾಕಲು ಲಂಚ ಕೇಳಿದ ಆರೋಪ ಕೇಳಿಬಂದಿದೆ . ಈ ಹಿನ್ನಲೆ ಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಕಾಂಗ್ರೆಸ್‌ ಟ್ವೀಟ್‌ ಮಾಡಿ ಆಕ್ರೋಶ ಹೊರಹಾಕಿದೆ. PSI ಹಗರಣ ಮುಚ್ಚಿಹಾಕಲು CID ಪೊಲೀಸರು 3 ಕೋಟಿ ಕೇಳಿದ್ರು ಆದರೆ ನಾನು 76 ಲಕ್ಷ ಕೊಟ್ಟಿದ್ದೇನೆ ಅಂತ ಆರ್‌.ಡಿ.ಪಾಟೀಲ್‌ ಆರೋಪ ಮಾಡಿದ್ದಾನೆ. ಪ್ರಾಮಾಣಿಕ, ಪಾರದರ್ಶಕ ತನಿಖೆ ಎಂದು ಡೈಲಾಗ್ ಹೊಡೆದಿದ್ದ ಬೊಮ್ಮಾಯಿ ಅವರೇ, ಇದೇನಾ ನಿಮ್ಮ ಪಾರದರ್ಶಕತೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ . ಸರ್ಕಾರದ ತನಿಖೆಯಲ್ಲಿ ಸತ್ಯ ಸಮಾಧಿಯಾಗುತ್ತಿದೆ.  PSI ಹಗರಣದ ಪಾರದರ್ಶಕತೆ ಹೇಗಿದೆ ಎಂಬುದು ಆರೋಪಿಯಿಂದಲೇ ಬಯಲಾಗಿದೆ. ಈ ಕುರಿತು 3 ಕೋಟಿ ಡೀಲಿಂಗ್‌ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಯಾಕೆ ಮಾತನಾಡುತ್ತಿಲ್ಲ ಎಂದು ಟ್ವೀಟ್​​​​ ಮೂಲಕ ಕಾಂಗ್ರೆಸ್​​​​​ ಪ್ರಶ್ನಿಸಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments