Select Your Language

Notifications

webdunia
webdunia
webdunia
webdunia

ಬಿಜೆಪಿ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಇನ್ನಿಲ್ಲ

ಬಿಜೆಪಿ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಇನ್ನಿಲ್ಲ
ಬೆಂಗಳೂರು , ಸೋಮವಾರ, 31 ಜುಲೈ 2017 (12:19 IST)
ಬಿಜೆಪಿಯ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ವಿಧಿವಶರಾಗಿದ್ದಾರೆ. ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಬಿ.ಬಿ. ಶಿವಪ್ಪ ಬೆಂಗಳೂರಿನ ಸುಗುಣ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಬಿ.ಬಿ. ಶಿವಪ್ಪ ಸಕಲೇಶಪುರದ ಹುಟ್ಟುರಿನಲ್ಲೂ ಕೊನೆಯ ದಿನಗಳನ್ನ ಕಳೆಯಲು ಇಚ್ಛಿಸಿದ್ದರು. ಆಸ್ಪತ್ರೆಯಿಂದ ಅವರನ್ನ ಹುಟ್ಟೂರಿಗೆ ಕರೆದೊಯ್ಯಲು ತಯಾರಿ ನಡೆಸುತ್ತಿದ್ದ ವೇಳೆಯೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನೇರ, ನಿಷ್ಠೂರ ನಡೆಗೆ ಖ್ಯಾತರಾಗಿದ್ದ ಬಿ.ಬಿ. ಶಿವಪ್ಪ ರಾಜ್ಯದಲ್ಲಿ ಬಿಜೆಪಿಯನ್ನ ತಳಮಟ್ಟದಿಂದ ಕಟ್ಟಿದ ಪ್ರಮುಖ ನಾಯಕರು.

1994, 1999ರಲ್ಲಿ ಸಕಲೆಶಪುರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಬಿ.ಬಿ. ಶಿವಪ್ಪ, ವಾಜಪೇಯಿ ರಾಜ್ಯಕ್ಕೆ ಬಂದಾಗ ತಮ್ಮ ಕಾರಿನಲ್ಲೇ ಪ್ರವಾಸ ಮಾಡಿಸಿದ್ದರು. ಬಿಜೆಪಿಯ ಹಿರಿಯರ ನಡವಳಿಕೆಯಿಂದ ಬೇಸತ್ತು ಹಿರಿಯರ ವೇದಿಕೆ ಕಟ್ಟಿದ್ದ ಬಿ.ಬಿ. ಶಿವಪ್ಪ ಒಮ್ಮೆ ಪಕ್ಷದಿಂದ ಉಚ್ಚಾಟನೆಯಾಗಿದ್ದರು. 2004ರಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಚುನಾವಣೆ ಸೋತ ಬಳಿಕ ಮತ್ತೆ ಬಿಜೆಪಿಗೆ ವಾಪಸ್ ಆಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನ ಕೂಡಿ ಹಾಕಿ ಅಸ್ವಾಭಾವಿಕ ಸೆಕ್ಸ್ ನಡೆಸುತ್ತಿದ್ದ ಪತಿ ಬಂಧನ