Select Your Language

Notifications

webdunia
webdunia
webdunia
webdunia

ಪತ್ನಿಯನ್ನ ಕೂಡಿ ಹಾಕಿ ಅಸ್ವಾಭಾವಿಕ ಸೆಕ್ಸ್ ನಡೆಸುತ್ತಿದ್ದ ಪತಿ ಬಂಧನ

ಪತ್ನಿಯನ್ನ ಕೂಡಿ ಹಾಕಿ ಅಸ್ವಾಭಾವಿಕ ಸೆಕ್ಸ್ ನಡೆಸುತ್ತಿದ್ದ ಪತಿ ಬಂಧನ
ಲಖನೌ , ಸೋಮವಾರ, 31 ಜುಲೈ 2017 (11:55 IST)
ಪಾಪಿ ಪತಿಯೊಬ್ಬ ಮಹಿಳೆಯನ್ನ ಕಬ್ಬಿಣದ ಸರಳಿನಲ್ಲಿ ಬಂಧಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಪ್ರಕರಣ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ. ನೆರೆಹೊರೆಯ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಮಹಿಳೆಯನ್ನ ರಕ್ಷಿಸಿದ್ದು, 18 ವರ್ಷಗಳ  ಕರ್ಮಕಾಂಡವನ್ನ ಮಹಿಳೆ ಬಿಚ್ಚಿಟ್ಟಿದ್ದಾಳೆ.
 

ವೈದ್ಯನೆಂದು ಹೇಳಿಕೊಂಡಿದ್ದ ಪತಿ 18 ವರ್ಷಗಳ ಹಿಂದೆ ವಿವಾಹವಾಗಿದ್ದ. ನಿರಂತರವಾಗಿ ಮಹಿಳೆ ಜೊತೆ ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಪ್ರತೀ ಸಾರಿ ಮಹಿಳೆ ವಿರೋಧಿಸಿದಾಗ ಅಮಾನುಷವಾಗಿ ದಂಡಿಸುತ್ತಿದ್ದ. ಇತ್ತೀಚೆಗೆ ಅವನ ಕ್ರೂರತನ ಮಿತಿಮೀರಿದ್ದು, ಮನೆಯ ಕೊಠಡಿಯಲ್ಲಿ ಕಬ್ಬಿಣದ ಸರಳಿನಿಂದ ಕಟ್ಟಿ ಕೂಡಿ ಹಾಕಿದ್ದ. ಉಪವಾಸ ಹಾಕಿ ಹಿಂಸಿಸುತ್ತಿದ್ದ.

3 ತಿಂಗಳಿಂದ ಮಹಿಳೆ ಕಾಣದ್ದಕ್ಕೆ ಅನುಮಾನಗೊಂಡ ನೆರೆಮನೆಯವರು ಮಹಿಳೆಯ ತವರು ಮನೆಗೆ ಮಾಹಿತಿ ನೀಡಿದ್ದಾರೆ. ಮಗಳ ಸುರಕ್ಷತೆ ಬಗ್ಗೆ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಗೃಹಬಂಧನದಲ್ಲಿದ್ದ ಮಹಿಳೆಯನ್ನ ಬಂಧಿಸಿದ್ದಾರೆ. ಬಿಡುಗಡೆ ಬಳಿಕ ಗಂಡನ ಹೀನ ಕೃತ್ಯವನ್ನ ನೊಂದ ಮಹಿಳೆ ಬಯಲಿ ಮಾಡಿದ್ಧಾರೆ. ಮದರಸಾದಲ್ಲಿ ಓದುತ್ತಿರುವ ಹೆಣ್ಣು ಮಕ್ಕಳು ಮನೆ ಬಂದಾಗ ಅವರ ಮೇಲೂ ಹಲ್ಲೆ ನಡೆಸಿದ್ಧಾನೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾಪಿ ಪತಿಯನ್ನ ಬಂಧಿಸಿ ಜೈಲಿಗಟ್ಟಿದ್ಧಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಎಸಿ ಬೋಗಿಗಳಲ್ಲಿ ಹೊದಿಕೆ ನೀಡದಿರಲು ರೈಲ್ವೆ ಇಲಾಖೆ ಚಿಂತನೆ