Select Your Language

Notifications

webdunia
webdunia
webdunia
webdunia

ಇವಿಎಂ ಮಿಷಿನ್‌ ಇರೋವರೆಗೆ ಬಿಜೆಪಿಗೇ ಗೆಲುವು: ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ವ್ಯಂಗ್ಯ

State Home Minister G. Parameshwar

Sampriya

ಬೆಂಗಳೂರು , ಭಾನುವಾರ, 24 ನವೆಂಬರ್ 2024 (11:46 IST)
ಬೆಂಗಳೂರು: ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್‌ ಅವರು ಇವಿಎಂ ಮಿಷಿನ್ ವಿರುದ್ಧ ಧ್ವನಿಯೆತ್ತಿದ್ದಾರೆ. ಇವಿಎಂ ಮಿಷಿನ್‌ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ಸ್ಟ್ರಾಟಜಿ ಮಾಡುವುದರಲ್ಲೂ ನಾವು ಫೇಲ್ ಆಗಿದ್ದೇವೆ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ನಾವು ಮಹಾ ವಿಕಾಸ ಅಗಾಡಿ ಅಧಿಕಾರಕ್ಕೆ ಬರುತ್ತದೆ ಎಂದುಕೊಂಡಿದ್ದೆವು. ಆದರೆ ಎಲ್ಲವೂ ಉಲ್ಟಾ ಆಗಿದೆ. ಅಶೋಕ್ ಗೆಹ್ಲೋಟ್, ಭಗೇಲ್ ಸೇರಿ ಅನುಭವಿ ಸಿಎಂಗಳು ಚರ್ಚೆ ಮಾಡಿದ್ದೇವೆ. ಬಹಳಷ್ಟು ಕಡೆ ಇವಿಎಂ ಮ್ಯಾನಿಪ್ಯುಲೆಟ್ ಮಾಡಿದ್ದಾರೆ ಎಂದು ಚರ್ಚೆ ಆಗಿದೆ. ಆದ್ರೆ ಜಾರ್ಖಂಡ್‌ನಲ್ಲಿ ಯಾಕೆ ಹಾಗಾಗಲಿಲ್ಲ? ಬಿಜೆಪಿಯವರು ಪ್ಲ್ಯಾನ್ ಆಫ್ ಆಕ್ಷನ್ ತರಹ ಇದನ್ನು ಮಾಡ್ತಾರೆ ಎಂದು ದೂರಿದ್ದಾರೆ.
 

ನಂಬಿಕೆ ಬರಬೇಕು ಅಂತ ಕೆಲವು ರಾಜ್ಯಗಳಲ್ಲಿ ಇವಿಎಂ ಹ್ಯಾಕ್ ಮಾಡುವುದಿಲ್ಲ. ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ಸ್ಟ್ರಾಟಜಿ ಮಾಡುವುದರಲ್ಲಿ ಕೂಡ ನಾವು ಫೇಲ್ ಆಗಿದ್ದೇವೆ. ಇವಿಎಂ ಇರುವ ತನಕ ಅವರೇ ಗೆಲ್ಲುತ್ತಾರೆ ಅನ್ನಿಸುತ್ತದೆ. ಬ್ಯಾಲೆಟ್ ಪೇಪರ್ ಬರಬೇಕು ಅಂತ ನಾವು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾವು ಕೊನೆ ಘಳಿಗೆಗೆ ಟಿಕೆಟ್ ಘೋಷಣೆ ಮಾಡಿದ್ವು, ಪಕ್ಷದಲ್ಲೂ ಗೊಂದಲ ಆಯ್ತು. ಶರದ್‌ ಪವಾರ್ ಗುಂಪು, ಉದ್ದವ್ ಠಾಕ್ರೆ ಗುಂಪಿನ ನಡುವೆ ಸರಿಯಾಗಿ ಹೊಂದಾಣಿಕೆ ಆಗಿಲ್ಲ. ವಿದರ್ಭದಲ್ಲಿ ಹೆಚ್ಚು ಸೀಟ್ ಬರಲಿಲ್ಲ. ಎಲ್ಲಿಯವರೆಗೆ ಇವಿಎಂ ಇರುತ್ತೆ ಅಲ್ಲಿಯವರೆಗೆ ಕಾಂಗ್ರೆಸ್ ಬರೋದು ಕಷ್ಟ ಆಗುತ್ತೆ ಎಂದು ನುಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್‌ಗೆ ಹ್ಯಾಟ್ರಿಕ್‌ ಸೋಲು: ಮನನೊಂದು ಅಭಿಮಾನಿ ಆತ್ಮಹತ್ಯೆಗೆ ಯತ್ನ