Select Your Language

Notifications

webdunia
webdunia
webdunia
webdunia

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಬಿಎಸ್‌ವೈ ಮೈಕ್ ಕಿತ್ತ ಕಾರ್ಯಕರ್ತರು

ಬಿಜೆಪಿ ಭಿನ್ನಮತ ಬಿಎಸ್‌ವೈ  ಬಿ.ಎಸ್.ಯಡಿಯೂರಪ್ಪ
ಇಂಡಿ , ಭಾನುವಾರ, 3 ಡಿಸೆಂಬರ್ 2017 (11:23 IST)
ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡುತ್ತಿರುವಾಗ ಮೈಕ್ ಕಿತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮುಂದುವರಿದಿದೆ.
ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪ, ಯಾತ್ರೆಯಲ್ಲಿ ಸಾವಿರಾರು ಜನ ಸೇರಲು ಮಾಜಿ ಶಾಸಕ ರವಿಕಾಂತ್ ಪಾಟೀಲ್ ಕಾರಣ ಎಂದು ಹೇಳುತ್ತಿದ್ದಂತೆ ಯಾತ್ರಾ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡು ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ನಡೆಯಿತು.
 
ಮಾಜಿ ಶಾಸಕ ರವಿಕಾಂತ್ ವಿರೋಧಿ ಬಣ ಯಡಿಯೂರಪ್ಪನವರಿಗೆ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಿತು. ವೇದಿಕೆಯಲ್ಲಿ ಸಂಘರ್ಷದ ವಾತಾವರಣ ಕಂಡ ಪೊಲೀಸರು ವೇದಿಕೆ ಮೇಲೆ ಆಗಮಿಸಿ ಕಾರ್ಯಕರ್ತರನ್ನು ಕೆಳಗಿಳಿಸಿ ಸಮಾಧಾನ ಪಡಿಸಿದರು ಎನ್ನಲಾಗಿದೆ.
 
ಇಂಡಿಯಲ್ಲಿನ ಭಿನ್ನಮತ ಶಮನಗೊಳಿಸಲು ಯಡಿಯೂರಪ್ಪ ರಾತ್ರಿ ವಾಸ್ತವ್ಯ ಹೂಡಿದ್ದರೂ ಬಿಜೆಪಿ ನಾಯಕರು ಅತ್ತ ಸುಳಿಯಲಿಲ್ಲ. ಮತ್ತೊಂದೆಡೆ ಕೂಡಲೇ ಜಿಲ್ಲಾಧ್ಯಕ್ಷರ ಬದಲಾವಣೆಯಾಗಬೇಕು ಎಂದು ಮಾಜಿ ಶಾಸಕ ರವಿಕಾಂತ ಬಣ ಒತ್ತಾಯಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ನಾಲ್ಕು ಬಂಪರ್ ಆಫರ್ ಕೊಟ್ಟ ವೊಡಾಫೋನ್!