Select Your Language

Notifications

webdunia
webdunia
webdunia
webdunia

ಹುಬ್ಬಳ್ಳಿಗೆ ಭೇಟಿ ನೀಡಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯನಕ್ಷ ಜೆಪಿ ನಡ್ಡಾ ನೇಹಾ ಮನೆಗೆ ಭೇಟಿ ಸಾಧ್ಯತೆ

JP Nadda

Krishnaveni K

ಹುಬ್ಬಳ‍್ಳಿ , ಭಾನುವಾರ, 21 ಏಪ್ರಿಲ್ 2024 (09:49 IST)
Photo Courtesy: Twitter
ಹುಬ್ಬಳ‍್ಳಿ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ನೇಹಾಳನ್ನು ಫಯಾಜ್ ಎಂಬ ಅನ್ಯಕೋಮಿನ ಯುವಕ ಹತ್ಯೆ ಮಾಡಿದ ಬೆನ್ನಲ್ಲೇ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಜೆಪಿ ನಡ್ಡಾ ಪ್ರಚಾರ ನಡೆಸಲಿದ್ದಾರೆ. ಇದಕ್ಕಾಗಿ ಬಿಜೆಪಿ ಸಕಲ ತಯಾರಿಯನ್ನೂ ಮಾಡಿಕೊಂಡಿದೆ. ನಿನ್ನೆಯಷ್ಟೇ ಪ್ರಧಾನಿ ಮೋದಿ ಕರ್ನಾಟಕಕ್ಕೆ ಭೇಟಿ ನೀಡಿ ಪ್ರಚಾರ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಭೇಟಿ ನೀಡುತ್ತಿದ್ದಾರೆ.

ನೇಹಾ ಹತ್ಯೆ ಪ್ರಕರಣದಿಂದಾಗಿ ಈಗ ಹುಬ್ಬಳ್ಳಿಯಲ್ಲಿ ಒಂದು ರೀತಿಯ ಸೂತಕದ ವಾತಾವರಣವಿದೆ. ಹಲವು ರಾಜಕೀಯ ನಾಯಕರು ನೇಹಾ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಇಂದು ನಡ್ಡಾ ಕೂಡಾ ಭೇಟಿ ನೀಡುವ ಸಾಧ‍್ಯತೆಯಿದೆ.

ಅಧಿಕೃತವಾಗಿ ನಡ್ಡಾ ಕಾರ್ಯಕ್ರಮದಲ್ಲಿ ನೇಹಾ ಮನೆಗೆ ಭೇಟಿ ನೀಡುವ ಯೋಜನೆಯಿಲ್ಲ. ಹಾಗಿದ್ದರೂ ಇದೀಗ ಹುಬ್ಬಳ್ಳಿಯಲ್ಲಿ ಇದು ಹಾಟ್ ಇಶ್ಯೂ ಆಗಿರುವುದರಿಂದ ನಡ್ಡಾ ನೇಹಾ ಕುಟುಂಬಸ್ಥರನ್ನು ಭೇಟಿ ಮಾಡುವ ಸಾಧ‍್ಯತೆಯಿದೆ. ಈಗಾಗಲೇ ಸಂಸದ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ನೇಹಾ ಮನೆಗೆ ಭೇಟಿ ಕೊಟ್ಟಿದ್ದಾರೆ. ಕಾಂಗ್ರೆಸ್ ನಾಯಕರೂ ಭೇಟಿ ಕೊಟ್ಟಿದ್ದಾರೆ. ಹೀಗಾಗಿ ನಡ್ಡಾ ಕೂಡಾ ಭೇಟಿ ನೀಡಿ ಸಾಂತ್ವನ ಹೇಳುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೂರದರ್ಶನ ಲೋಗೋ ಕೇಸರಿ ಬಣ್ಣ: ಮಮತಾ ಬ್ಯಾನರ್ಜಿ ಆಕ್ರೋಶ