Select Your Language

Notifications

webdunia
webdunia
webdunia
webdunia

ಬಿಎಸ್ ಯಡಿಯೂರಪ್ಪ ಸಿಎಂ ಆದ್ರೆ ನಾನೇ ಸಿಎಂ ಆದಂತೆ ಎಂದ ಬಿಜೆಪಿ ಶಾಸಕ

ಬಿಎಸ್ ಯಡಿಯೂರಪ್ಪ ಸಿಎಂ ಆದ್ರೆ ನಾನೇ ಸಿಎಂ ಆದಂತೆ ಎಂದ ಬಿಜೆಪಿ ಶಾಸಕ
ಕೊಪ್ಪಳ , ಶನಿವಾರ, 7 ಮಾರ್ಚ್ 2020 (10:38 IST)
ಕೊಪ್ಪಳ : ಬಿಎಸ್ ಯಡಿಯೂರಪ್ಪ ಸಿಎಂ ಆದ್ರೆ ನಾನೇ ಸಿಎಂ ಆದಂತೆ. ಅವರ ಬಳಿ ನಾನು ಯಾವ ಸ್ಥಾನವನ್ನ ಕೇಳಿದ್ರೂ ಕೊಡ್ತಾರೆ ಎಂದು ಬಿಜೆಪಿ ಶಾಸಕ ಬಸವರಾಜ್ ದಡೇಸಗೂರ್ ಹೇಳಿದ್ದಾರೆ.


ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಬಿಎಸ್ ವೈ ಗೆ ಟೆನ್ಷನ್ ಕೊಡುವುದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದೇ ನಮ್ಮ ಸೌಭಾಗ್ಯ. 224 ಕ್ಷೇತ್ರದಲ್ಲಿ ಕನಕಗಿರಿಗೆ ವಿಶೇಷ ಪ್ಯಾಕೆಜ್ ಇರುತ್ತದೆ. ನಾನು ಯಾವುದೇ ಮನವಿ ಕೊಟ್ಟರು ಸ್ಪಂದಿಸುತ್ತಾರೆ. ಯಡಿಯೂರಪ್ಪ ನನ್ನ ಮನವಿಗೆ ಹಾಗೆಯೇ ಸಹಿ ಹಾಕ್ತಾರೆ. ಸಿಂಗಲ್ ಸರ್ಕಾರ ಬಂದುದ್ರೆ ನಾನು ಆವತ್ತೇ ಮಂತ್ರಿ ಆಗ್ತಿದ್ದೆ. ಕನಕಗಿರಿ ಮಣ್ಣಿನ ಗುಣ ಹಾಗಿದೆ. ಇಲ್ಲಿ ಯಾರೇ ಗೆದ್ದರೂ ಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ.


ನವಲಿ ಸಮಾನಾಂತರ ಡ್ಯಾಂಗೆ ಬಜೆಟ್ ನಲ್ಲಿ ಅನುದಾನ ನೀಡಿದ್ದು, ಬಜೆಟ್ ನಲ್ಲಿ 20 ಕೋಟಿ ರೂ. ಘೋಷಣೆ ಹಿನ್ನಲೆ ಇದು ಕೇವಲ ಒಂದು ಪರ್ಸೆಂಟ್ ಮಾತ್ರ ಅನುದಾನ, ಮುಂದೆ ನೋಡಿ ಹೇಗೆ ಬದಲಾವಣೆ ಆಗುತ್ತೆ ಎಂದ ಶಾಸಕ  ಬಸವರಾಜ್ ದಡೇಸಗೂರ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಳೆ ಕಂದನನ್ನು ಹಾಲಿನಲ್ಲಿ ವಿಷ ಬೆರೆಸಿ ಕೊಂದ ಹೆತ್ತವರು!