ಸರ್ಕಾರಿ ಅಧಿಕಾರಿಗಳ ಮೇಲೆ ಬಿಜೆಪಿ ಶಾಸಕ ಅರಗಜ್ಞಾನೇಂದ್ರ ದರ್ಪ

ಶನಿವಾರ, 12 ಜನವರಿ 2019 (12:14 IST)
ಬೆಂಗಳೂರು : ಈ ಹಿಂದೆ ಪಿಡಿಒ ಗೆ ಧಮ್ಕಿ ಹಾಕಿದ್ದ ಬಿಜೆಪಿ ಶಾಸಕ ಅರಗಜ್ಞಾನೇಂದ್ರ ಮತ್ತೊಮ್ಮೆ ಸರ್ಕಾರಿ ಅಧಿಕಾರಿಗಳ ಮೇಲೆ ದರ್ಪ ತೋರಿಸಿದ್ದಾರೆ.

ತಾಲೂಕು ಕಚೇರಿಯಲ್ಲಿ ತಮ್ಮ ಕೆಲಸವಾಗುತ್ತಿಲ್ಲ ಎಂದು ಬೆಂಬಲಿಗರಿಂದ ಶಾಸಕರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಶಾಸಕ ಅರಗಜ್ಞಾನೇಂದ್ರ ಕಚೇರಿಗೆ ತೆರಳಿ ಪಿಡಿಒ, ತಹಶೀಲ್ದಾರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.


 

ನಂತರ ಈ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಶಾಸಕ ಅರಗಜ್ಞಾನೇಂದ್ರ ಅವರು,’ತಾಳ್ಮೆ ಕಳೆದುಕೊಂಡು ಈ ರೀತಿ ಮಾತನಾಡಿದೆ. ನನ್ನ ಮಾತಿನಿಂದ ನೋವಾಗಿದ್ರೆ ನಾನು ಆಡಿದ ಮಾತನ್ನು ವಾಪಾಸ್ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಒಂದು ವಾರದಲ್ಲಿ ನೂತನ ಮರಳು ನೀತಿ ಪ್ರಕಟ- ಡಿಸಿಎಂ ಪರಮೇಶ್ವರ್