Select Your Language

Notifications

webdunia
webdunia
webdunia
webdunia

ಮುನಿರತ್ನ ಜೊತೆಗಿದ್ದ ಬಿಜೆಪಿ ನಾಯಕರೆಲ್ಲರೂ ಎಚ್ಐವಿ ಟೆಸ್ಟ್ ಮಾಡ್ಸೋದು ಒಳ್ಳೇದು

Munirathna
Photo Credit: Facebook
ಬೆಂಗಳೂರು: ಎಚ್ ಐವಿ ಇಂಜೆಕ್ಟ್ ಮಾಡಿ ಹಲವರನ್ನು ಹನಿಟ್ರ್ಯಾಪ್ ಮಾಡುತ್ತಿದ್ದರೆಂದು ಗಂಭೀರ ಆರೋಪಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಬಗ್ಗೆ ಕಾಂಗ್ರೆಸ್ ಕುಹುಕವಾಡಿದೆ.

ಮುನಿರತ್ನಗೆ ಆಪ್ತರಾಗಿದ್ದ ಬಿಜೆಪಿ ನಾಯಕರೆಲ್ಲರೂ ಈಗ ಎಚ್ಐವಿ ಟೆಸ್ಟ್ ಮಾಡ್ಸೊದು ಒಳ್ಳೆಯದು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಯಾರಿಗೆಲ್ಲಾ ಮುನಿರತ್ನ ಎಚ್ಐವಿ ಇಂಜೆಕ್ಟ್ ಮಾಡಿ ತಮಗೆ ಬೇಕಾದಂತೆ ಕುಣಿಸುತ್ತಿದ್ದರೋ ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದೆ.

ಜಾತಿ ನಿಂದನೆ, ಕೊಲೆ ಬೆದರಿಕೆ ಆರೋಪದಲ್ಲಿ ಬಂಧಿತರಾಗಿದ್ದ ಶಾಸಕ ಮುನಿರತ್ನ ವಿರುದ್ಧ ಮಹಿಳೆಯರೊಬ್ಬರು ರೇಪ್ ಕೇಸ್ ಮತ್ತು ಹನಿಟ್ರ್ಯಾಪ್ ಆರೋಪ ಮಾಡಿದ್ದರು. ಇದೀಗ ಆಕೆ ದೂರಿನಲ್ಲಿ ಹೇಳಿದ ವಿಚಾರಗಳು ಗಂಭೀರವಾಗಿದ್ದು, ಮುನಿರತ್ನ ತಮ್ಮ ರಾಜಕೀಯ ಎದುರಾಳಿಗಳನ್ನು ಎಚ್ಐವಿ ಇಂಜೆಕ್ಟ್ ಮಾಡಿ ಅಥವಾ ಎಚ್ಐವಿ ಸೋಂಕಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಹನಿಟ್ರ್ಯಾಪ್ ಮಾಡುತ್ತಿದ್ದರು ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ.

ಹೀಗಾಗಿ ಈಗ ಮುನಿರತ್ನ ವಿರುದ್ಧ ಕಾಂಗ್ರೆಸ್ ಇನ್ನಿಲ್ಲದಂತೆ ಟೀಕಾಪ್ರಹಾರ ನಡೆಸುತ್ತಿದೆ. ಇತ್ತ ಬಿಜೆಪಿ ಕೂಡಾ ಮುನಿರತ್ನ ಪ್ರಕರಣದಿಂದ ಮುಜುಗರಕ್ಕೀಡಾಗಿದ್ದು, ತಪ್ಪು ನಡೆದಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದಿದೆ. ಅಲ್ಲದೆ, ಮುನಿರತ್ನರಿಂದ ಬಿಜೆಪಿ ಶಾಸಕರು ಅಂತರ ಕಾಯ್ದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

370 ನೇ ವಿಧಿ ರದ್ದು: ಕಾಂಗ್ರೆಸ್ ಗೆ ಬೆಂಬಲ ಎಂದ ಪಾಕಿಸ್ತಾನದಿಂದ ಕೈ ನಾಯಕರಿಗೆ ಮುಜುಗರ