Select Your Language

Notifications

webdunia
webdunia
webdunia
webdunia

ಈಶ್ವರಪ್ಪಗೆ ಬಿಜೆಪಿ ಹೈಕಮಾಂಡ್ ಕೊಟ್ಟಿತ್ತು ಬಿಗ್ ಆಫರ್

KS Eshwarappa

Krishnaveni K

ಬೆಂಗಳೂರು , ಸೋಮವಾರ, 18 ಮಾರ್ಚ್ 2024 (08:01 IST)
ಬೆಂಗಳೂರು: ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಕೆಎಸ್ ಈಶ್ವರಪ್ಪಗೆ ಬಿಜೆಪಿ ಹೈಕಮಾಂಡ್ ಭರ್ಜರಿ ಆಫರ್ ಕೊಟ್ಟಿತ್ತು. ಆದರೂ ಅವರ ಅಸಮಾಧಾನ ಶಮನವಾಗಿಲ್ಲ.

ತಮ್ಮ ಪುತ್ರ ಕಾಂತೇಶ್ ನಿಗೆ ಟಿಕೆಟ್ ಸಿಗದ ಅಸಮಾಧಾನಕ್ಕೆ ಈಶ‍್ವರಪ್ಪ ಶಿವಮೊಗ್ಗದಿಂದ ತಾವೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದು ಬಿಜೆಪಿಗೆ ತಲೆನೋವಾಗಿದೆ. ಅವರನ್ನು ಸಮಾಧಾನಿಸಲು ಯತ್ನಿಸುತ್ತಿದೆ. ಆದರೆ ಈಶ್ವರಪ್ಪಗೆ ಯಡಿಯೂರಪ್ಪ ಮತ್ತು ಮಕ್ಕಳೇ ತಮಗೆ ಮತ್ತು ಪುತ್ರನಿಗೆ ಟಿಕೆಟ್ ಮಿಸ್ ಆಗಲು ಕಾರಣ ಎಂಬ ಅಸಮಾಧಾನವಿದೆ.

ಈ ನಡುವೆ ಅವರನ್ನು ಮನವೊಲಿಸಲು ಬಿಜೆಪಿ ಕೇಂದ್ರ ನಾಯಕರು ಈಶ್ವರಪ್ಪ ಪುತ್ರ ಕಾಂತೇಶ್ ಗೆ ಎಂಎಲ್ ಸಿ ಹುದ್ದೆಯ ಭರ್ಜರಿ ಆಫರ್ ನೀಡಿದ್ದರು. ಆದರೆ ಈಶ್ವರಪ್ಪ ಈ ಆಫರ್ ತಿರಸ್ಕರಿಸಿದ್ದಾರೆ. ನನ್ನ ಮಗನಿಗೆ ಎಂಎಲ್ ಸಿ, ಎಂಪಿ ಸ್ಥಾನ ಕೊಡುವುದಲ್ಲ. ಪಕ್ಷ ಶುದ್ಧಿಯಾಗಬೇಕು. ಸಾಕಷ್ಟು ಕಾರ್ಯಕರ್ತರ ನೋವಿಗೆ ಪರಿಹಾರ ಸಿಗಬೇಕು ಎಂಬುದೇ ನನ್ನ ಉದ್ದೇಶ ಎಂದಿದ್ದಾರೆ.

ಶಿವಮೊಗ್ಗದಿಂದ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಕಣಕ್ಕಿಳಿದಿದ್ದಾರೆ. ಇದು ಈಶ್ವರಪ್ಪ ಆಕ್ರೋಶಕ್ಕೆ ಕಾರಣವಗಿದೆ. ಮೋದಿ ಕರ್ಯಕ್ರಮಕ್ಕೆ ಬರಲು ಆಹ್ವಾನ ನೀಡಿದ್ದರೂ ತಿರಸ್ಕರಿಸಿದ್ದಾರೆ. ಗೆದ್ದ ಬಳಿಕ ಮೋದಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಂದೆಂದಿಗೂ ನಮ್ಮ ಹೃದಯದಲ್ಲಿ: ಭಾವನಾತ್ಮಕ ಫೋಸ್ಟ್ ಹಂಚಿಕೊಂಡ ಅಶ್ವಿನಿ ಪುನೀತ್