Select Your Language

Notifications

webdunia
webdunia
webdunia
webdunia

ಒಳ್ಳೆಯ ಅವಕಾಶವಿರುವಾಗ ಬಿಜೆಪಿ-ಜೆಡಿಎಸ್ ಒಡೆದು ಹೋಗಿದೆ: ಸದಾನಂದ ಗೌಡ ಬೇಸರ

ಒಳ್ಳೆಯ ಅವಕಾಶವಿರುವಾಗ ಬಿಜೆಪಿ-ಜೆಡಿಎಸ್ ಒಡೆದು ಹೋಗಿದೆ: ಸದಾನಂದ ಗೌಡ ಬೇಸರ

Sampriya

ಬೆಂಗಳೂರು , ಗುರುವಾರ, 1 ಆಗಸ್ಟ್ 2024 (16:47 IST)
Photo Courtesy X
ಬೆಂಗಳೂರು: ಇದೀಗ ಎನ್‌ಡಿಎ ತಂಡಕ್ಕೆ ಅದ್ಭುತ ಅವಕಾಶವಿದೆ. ಆದರೆ ವಿರೋಧ ಪಕ್ಷಗಳ ಸ್ಟಾರ್ ಚೆನ್ನಾಗಿಲ್ಲ. ಒಳ್ಳೆಯ ಜ್ಯೋತಿಷಿಯನ್ನುಭೇಟಿಯಾಗಿ ಅದನ್ನೆಲ್ಲ ಸರಿಮಾಡಿಸಿಕೊಳ್ಳಲಿ ಎಂದು ಮಾಜಿ ಕೇಂದ್ರ  ಮಂತ್ರಿ ಡಿವಿ ಸದಾನಂದ ಗೌಡ ಅವರು ಹೇಳಿದರು.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸರ್ಕಾರ ಜಾಗ ನುಂಗಿಕೊಂಡು, ಹೆಂಡತಿ ಹೆಸರಿಗೆ ಮಾಡೋ ನಿಕೃಷ್ಟ ರಾಜಕೀಯವನ್ನು ಮಾಡುತ್ತಿದೆ. ಇದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕೆಂದರು.

ಕಾಂಗ್ರೆಸ್ ಒಡೆದ ಮನೆಯಾಗಿದೆ ಎನ್ನುವ ಬದಲು ಇದೀಗ ಬಿಜೆಪಿ-ಜೆಡಿಎಸ್ ಒಡೆದ ಮನೆ ಆಗಿದೆ.  ಯತ್ನಾಳ್, ಜಾರಕಿಹೋಳಿ ಒಂದು ಕಡೆ, ಜಿಟಿ ದೇವೇಗೌಡ ಮತ್ತೊಂದು. ಇದೀಗ ಎನ್‌ಡಿಎಗೆ ಒಳ್ಳೆಯ ಅವಕಾಶವಿರುವಾಗ ವಿಪಕ್ಷಗಳ ಸ್ಟಾರ್ ಚೆನ್ನಾಗಿಲ್ಲ ಎಂದು ಅನಿಸುತ್ತದೆ.

ವಿಪಕ್ಷದಲ್ಲಿ ಸಾಮರಸ್ಯವಿಲ್ಲದಿರುವುದಕ್ಕೆ ನೋವಿದೆ. ಒಂದೇಡೆ ಕಾನೂನು ಹೋರಾಟ ಮಾಡಬೇಕು, ಮತ್ತೊಂದೆಡೆ ರಾಜಕೀಯ ಹೋರಾಟ ಮಾಡಬೇಕೆಂದು ಬೇಸರ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಯನಾಡು ದುರಂತದಲ್ಲಿ ಬಗೆದಷ್ಟೂ ಸಿಗುತ್ತಿದೆ ಮೃತದೇಹಗಳು, ಸಾವಿನ ಸಂಖ್ಯೆ 288ಕ್ಕೆ ಏರಿಕೆ