Select Your Language

Notifications

webdunia
webdunia
webdunia
webdunia

ಬಿಜೆಪಿಯ ಹೋರಾಟ, ಆರೋಪಗಳಿಂದ ಸ್ಟೀಲ್ ಬ್ರಿಡ್ಜ್ ಕೈ ಬಿಟ್ಟಿಲ್ಲ: ಕಾಂಗ್ರೆಸ್

ಬಿಜೆಪಿಯ ಹೋರಾಟ, ಆರೋಪಗಳಿಂದ ಸ್ಟೀಲ್ ಬ್ರಿಡ್ಜ್ ಕೈ ಬಿಟ್ಟಿಲ್ಲ: ಕಾಂಗ್ರೆಸ್
ಬೆಂಗಳೂರು , ಶುಕ್ರವಾರ, 3 ಮಾರ್ಚ್ 2017 (17:47 IST)
ಬಿಜೆಪಿಯ ಹೋರಾಟ, ಆರೋಪಗಳಿಗೆ ಹೆದರಿ ಸ್ಟೀಲ್ ಬ್ರಿಡ್ಜ್ ಯೋಜನೆ ಕೈ ಬಿಟ್ಟಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
 
ಬಿಜೆಪಿ ಸರಕಾರದ ಅವಧಿಯಲ್ಲಿಯೇ ಸ್ಟೀಲ್ ಬ್ರಿಡ್ಜ್ ಯೋಜನೆ ಪ್ರಸ್ತಾಪವಾಗಿತ್ತು. ಅದನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತರಲು ಪ್ರಯತ್ನಿಸಿದೆಯಷ್ಟೆ. ಬಿಜೆಪಿ ಪದೇ ಪದೇ ಆರೋಪಗಳಿಂದಾಗಿ ಬೇಸತ್ತು ಯೋಜನೆ ನಿಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.
 
ಸರಕಾರ ಯೋಜನೆಯನ್ನು ಮುಂದುವರಿಸಿದ್ದಲ್ಲಿ ಅನಗತ್ಯವಾಗಿ ಭ್ರಷ್ಟಾಚಾರದ ಕಳಂಕ ಹೊರಬೇಕಾಗಿತ್ತು. ಸಿಎಂ ಸಿದ್ದರಾಮಯ್ಯ ಯಾವತ್ತೂ ಕಳಂಕ ಹೊರುವಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ಆದ್ದರಿಂದ, ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
 
ಬಿಜೆಪಿ ನಾಯಕರು ಅಭಿವೃದ್ಧಿ ವಿರೋಧಿಗಳು. ರಾಜ್ಯ ಅಭಿವೃದ್ಧಿಯಾದರೆ ತಮ್ಮ ಬೆಳೆ ಬೇಯುವುದಿಲ್ಲ ಎಂದು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅರುಣ್ ಜೇಟ್ಲಿ ಭೇಟಿಯಾದ ದೇವೇಗೌಡರು: 570 ಕೋಟಿ ಬಿಡುಗಡೆಗೆ ಮನವಿ