Select Your Language

Notifications

webdunia
webdunia
webdunia
webdunia

ಅರುಣ್ ಜೇಟ್ಲಿ ಭೇಟಿಯಾದ ದೇವೇಗೌಡರು: 570 ಕೋಟಿ ಬಿಡುಗಡೆಗೆ ಮನವಿ

ಅರುಣ್ ಜೇಟ್ಲಿ ಭೇಟಿಯಾದ ದೇವೇಗೌಡರು: 570 ಕೋಟಿ ಬಿಡುಗಡೆಗೆ ಮನವಿ
ಹಾಸನ , ಶುಕ್ರವಾರ, 3 ಮಾರ್ಚ್ 2017 (17:37 IST)
ಶ್ರವಣಬೆಳಗೊಳದಲ್ಲಿ ಮುಂದಿನ ವರ್ಷ ಮಹಾಮಸ್ತಕಾಭಿಷೇಕ ನಡೆಯಲಿರುವ ಹಿನ್ನೆಲೆಯಲ್ಲಿ 300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೇಂದ್ರ ವಿತ್ತಖಾತೆ ಸಚಿವ ಅರುಣ್ ಜೇಟ್ಲಿಯವರಿಗೆ ಮನವಿ ಮಾಡಿದ್ದಾರೆ.
 
ನವದೆಹಲಿಯ ನಾರ್ಥ್‌ಬ್ಲಾಕ್‌ನಲ್ಲಿ ಎಚ್.ಡಿ.ದೇವೇಗೌಡರು, ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿ ಕುಡಿಯುವ ನೀರಿನ ಯೋಜನೆ, ಮೆಘಾ ಡೈರಿ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವಂತೆ ಕೋರಿದ್ದೇನೆ ಎಂದು ತಿಳಿಸಿದ್ದಾರೆ. 
 
ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಹಾಸನ ನಗರ ಸೇರ್ಪಡೆ ಕುರಿತಂತೆ ಚರ್ಚೆ ನಡೆಸಿದ್ದು ಒಟ್ಟು 570 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೋರಿದ್ದೇನೆ ಎಂದು ತಿಳಿಸಿದ್ದಾರೆ.
 
ಕೇಂದ್ರ ಸಚಿವ ಅರುಣ್ ಜೇಟ್ಲಿ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಎಫ್‌ಟಿಐಐ ಅಧ್ಯಕ್ಷ ಸ್ಥಾನದಿಂದ ಗಜೇಂದ್ರ ಚೌಹಾಣ್ ನಿರ್ಗಮನ