Publish Date: Mon, 29 Jan 2024 (14:44 IST)
Updated Date: Mon, 29 Jan 2024 (14:56 IST)
ಬೆಂಗಳೂರು-ಮಂಡ್ಯ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.ಬಿಜೆಪಿಯವರು ಅನಗತ್ಯವಾಗಿ ಕ್ರೀಯೇಟ್ ಮಾಡ್ತಿದ್ದಾರೆ.ಅನಗತ್ಯವಾಗಿ ಅವರ ಅಂಜೆಡ್ ಇದೆಯಲ್ಲ.ಅವರು ಪರ್ಮಿಷನ್ ತಗೆದುಕೊಂಡಿರೋದು ನ್ಯಾಷನಲ್ ಫ್ಲಾಗ್ ಮತ್ತು ಕನ್ನಡ ಧ್ವಜ ಹಾರಿಸ್ತೀವಿ ಅಂತ ನಮಗೆ ಯಾವ ಜೆಂಡಕ್ಕೂ ವಿರೋಧವಿಲ್ಲ.ನಾಳೆ ಬಂದು ಡಿಸಿ ಅಫೀಸ್ ಹತ್ತಿರ ಮಾಡಬಹುದು ಹಂಗೆಲ್ಲ ಮಾಡೋಕೆ ಆಗಲ್ಲ.ಯಾವ ಪರ್ಮಿಷನ್ ತಗೆದುಕೊಂಡಿದ್ದಾರೆ ಅದನ್ನ ಮಾಡಬೇಕಿತ್ತು.ಅದಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ
ಬಿಜೆಪಿಯವರೇ ಪ್ರಚೋದನೆ ಮಾಡ್ತಿದ್ದಾರೆ.ಪ್ರತಿಭಟನೆ ಯಾತಕ್ಕಾಗಿ ಮಾಡ್ತಿದ್ದಾರೆ?ಎಲೆಕ್ಷನ್ ಬರ್ತಿದೆ ಅದಕ್ಕಾಗಿ ಇವರು ಮಾಡ್ತಿದ್ದಾರೆ.ಎಲೆಕ್ಷನ್ ಗೋಸ್ಕರ ಇವರ ಮಾಡ್ತಿರೋದು.ಪಂಚಾಯತಿ ಅವರು ಏನ್ ಪರ್ಮಿಷನ್ ಕೊಟ್ಟಿದ್ದರು .ಆದ್ರ ಪ್ರಕಾರ ನಡೆದುಕೊಂಡಿದ್ದಾರೆ.ಜಿಲ್ಲಾಡಳಿತ ಯಾಕೆ ಮಧ್ಯಪ್ರವೇಶ ಮಾಡ್ತು?ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.