Publish Date: Wed, 29 Jul 2026 (17:02 IST)
Updated Date: Wed, 29 Jul 2026 (17:04 IST)
ಕನಕಪುರ: ಕನಕಪುರ ತಾಲೂಕಿನ ಸಾಸಲಾಪುರ ಗ್ರಾಮದಲ್ಲಿ ಇಂದು ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಜನಪ್ರತಿನಿಧಿಗಳು ಮತ್ತು ಬಿಜೆಪಿ ಪ್ರಮುಖರ ತಂಡವು ಪ್ರವಾಸ ಕೈಗೊಂಡು, ಬರಪೀಡಿತ ಪ್ರದೇಶದ ರೈತರೊಂದಿಗೆ ನೇರ ಸಂವಾದ ನಡೆಸಿತು. ಸಾಸಲಾಪುರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಎದುರಾಗಿರುವ ತೀವ್ರ ನೀರಾವರಿ ಅಭಾವ ಹಾಗೂ ಬೆಳೆ ಹಾನಿಯ ಕುರಿತು ನಾಯಕರು ವಿವರವಾದ ಅಧ್ಯಯನ ನಡೆಸಿದರು.
ಅಂತರ್ಜಲ ಮಟ್ಟ ಕುಸಿದ ಪರಿಣಾಮ ಬೋರ್‍ವೆಲ್‍ಗಳು ಬತ್ತಿ ಹೋಗಿದ್ದು, ಕೃಷಿಗೆ ಹಾಗೂ ಜಾನುವಾರುಗಳಿಗೆ ನೀರಿನ ತೀವ್ರ ಅಭಾವ ಎದುರಾಗಿದೆ. ಮಳೆ ಇಲ್ಲದೆ ಒಣಗಿದ ಬೆಳೆಗಳಿಗೆ ಸೂಕ್ತ ಪರಿಹಾರ ಧನ ತಕ್ಷಣ ಬಿಡುಗಡೆಯಾಗಬೇಕು ಎಂದು ರೈತರು ಮನವಿ ಮಾಡಿದರು ಹಾಗೂ ಬರಪೀಡಿತ ಅವಧಿಯಲ್ಲಿ ರೈತರ ಮೇಲಿರುವ ಸಾಲ ಮರುಪಾವತಿಯ ಒತ್ತಡವನ್ನು ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಈ ಬರ ಅಧ್ಯಯನ ಹಾಗೂ ಸಮಾಲೋಚನಾ ಸಭೆಯಲ್ಲಿ ಪ್ರಮುಖ ಜನಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರಾದ ವಿಧಾನಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಹೆಚ್.ಎಸ್. ಗೋಪಿನಾಥ್, ಮಾಜಿ ಸಚಿವ ಮಹೇಶ್ ಶಾಸಕ ಶ್ರೀವತ್ಸ, ರಾಮನಗರ ಬಿಜೆಪಿ ಮುಖಂಡ ಫಣೀಶ್, ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ರೈತ ಮುಖಂಡರು ಇದ್ದರು.
ರೈತರ ಅಳಲನ್ನು ಆಲಿಸಿದ ಜನಪ್ರತಿನಿಧಿಗಳು, "ರೈತರ ಈ ಕಷ್ಟದ ಸಮಯದಲ್ಲಿ ನಾವು ಅವರ ಬೆನ್ನಿಗೆ ನಿಲ್ಲಲಿದ್ದೇವೆ. ಸಾಸಲಾಪುರ ಸೇರಿದಂತೆ ಕನಕಪುರ ತಾಲೂಕಿನ ಬರ ಪರಿಸ್ಥಿತಿಯ ನೈಜ ವರದಿಯನ್ನು ಸರ್ಕಾರದ ಗಮನಕ್ಕೆ ತಂದು, ತಕ್ಷಣದ ಬರವರಿ ಪರಿಹಾರ ಕಾರ್ಯಕ್ರಮಗಳು ಹಾಗೂ ಕೃಷಿಕರಿಗೆ ಗರಿಷ್ಠ ನೆರವು ತಲುಪಿಸಲು ಶ್ರಮಿಸಲಾಗುವುದು" ಎಂದು ಭರವಸೆ ನೀಡಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ