ಬಿಜೆಪಿ ಪಕ್ಷವು ಬಸವಣ್ಣರಂತಹ ವಿಚಾರಶೀಲರನ್ನ ಹೊಂದಿದೆ: ಹೆಚ್.ಕೆ ಸುರೇಶ್

Webdunia
ಭಾನುವಾರ, 7 ಮೇ 2023 (20:00 IST)
ಬಿಜೆಪಿ ಪಕ್ಷವು ಇದಾಗಲೇ ಕೆಂಪೇಗೌಡರAತಹ ನಾಯಕರನ್ನು, ಬಸವಣ್ಣನಂತಹ ವಿಚಾರಶೀಲರನ್ನು ಪಡೆದಿದೆ. ಈ ಪಕ್ಷಕ್ಕೆ ಮತಹಾಕುವುದರ ಮೂಲಕ ನಮ್ಮ ನಾಡನ್ನು ಮತ್ತೆ ಸುವರ್ಣ ಯುಗದತ್ತ ಕೊಂಡೊಯ್ಯುವ ಕಾರ್ಯವನ್ನು ಸಮಾಜ ಮಾಡಬೇಕಿದೆ ಎಂದು ಬೇಲೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ಕೆ ಸುರೇಶ್ ಹೇಳಿದರು.
 
 ಬೇಲೂರಿನ ನೇರ್ಲಿಗೆಯಲ್ಲಿ ಮಾತನಾಡಿದ ಅವರು, ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕಾದರೆ ನಾಡಿನ ಇತಿಹಾಸದ ಕುರಿತಾದ ಅರಿವಿರಬೇಕು. ಸಾಮಾನ್ಯವಾಗಿ ಬಿಜೆಪಿ ನಾಯಕರಿಗೆ ಇದರ ಅರಿವು ಇರುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯೇ ಅವರ ಭವಿಷ್ಯವನ್ನು ಎತ್ತಿ ಹೇಳುತ್ತಿದೆ. ಜನರೇ ಅವರ ಮೇಲೆ ತಿರುಗಿ ಬಿದ್ದಿದ್ದಾರೆ. ನರೇಂದ್ರ ಮೋದಿಯವರು ಹನುಮಂತನ ಅವತಾರವೇ ಆಗಿದ್ದಾರೆ. ಇಂತಹ ದೈವಭೂಮಿಯಲ್ಲಿ ನಾವು ನೆಲೆಸಿ ಬಿಜೆಪಿಗೆ ಮತ ಹಾಕುವ ಮೂಲಕ ಸಮಾಜ ಸೇವೆಯಯನ್ನು ಮಾಡೋಣ. ಬೇಲೂರಿನ ಸಮಗ್ರ ಅಭಿವೃದ್ಧಿಯ ಕಾರ್ಯಕ್ಕೆ ಕೈ ಜೋಡಿಸೋಣ.  ಸಮಾಜ ಸೇವೆಯೆಂದರೆ ಉತ್ತಮ ಆಡಳಿತಕ್ಕೆ ಬೆಂಬಲವನ್ನು ಸೂಚಿಸುವುದೂ ಆಗಿದೆ. ನೀವು ನನ್ನನ್ನು ಗೆಲ್ಲಿಸುವ ಮೂಲಕ ಬೇಲೂರಿನ ಜಯವನ್ನು ನೋಡುತ್ತೀರಿ ಎನ್ನುವ ನಂಬಿಕೆ ನನ್ನಲ್ಲಿದೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತರಗತಿಯಲ್ಲಿ ನಿರತರಾದ ವಿದ್ಯಾರ್ಥಿಗಳ ಮೇಲೆ ಬಿದ್ದ ಫ್ಯಾನ್‌, ಮುಂದೇನಾಯ್ತು ನೋಡಿ

ಎಲ್ಲ ಹೊರೆಯನ್ನು ಜನರ ಮೇಲೆ ಹಾಕುವ ಮೋದಿ ಯಾವಾಗ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ

₹900ಕೋಟಿ ವೆಚ್ಚದಲ್ಲಿ ದೇಶದ ಎರಡನೇ ಅತಿ ದೊಡ್ಡ ಕ್ರೀಡಾಂಗಣಕ್ಕೆ ಸಿದ್ದರಾಮಯ್ಯ ಶಂಕುಸ್ಥಾಪನೆ

ಕಿರಾಣಿ ಅಂಗಡಿಗೆ ಹೋಗುತ್ತಿದ್ದ ಬಾಲಕಿಯ ಕಿಡ್ನ್ಯಾಪ್ ಮಾಡಿ ಕೊಲೆ: ಆರೋಪಿ ಅರೆಸ್ಟ್‌

ರಾಜ್ಯಸಭೆಯ ಅರ್ಜಿಗಳ ಸಮಿತಿ ಅಧ್ಯಕ್ಷರಾಗಿ ರಾಘವ್ ಚಡ್ಡಾ ನೇಮಕ

ಮುಂದಿನ ಸುದ್ದಿ
Show comments