Select Your Language

Notifications

webdunia
webdunia
webdunia
webdunia

ವಿ.ಸಭೆ ಎಲೆಕ್ಷನ್ ಸೋಲಿನ ಬಳಿಕ 2 ಮಹತ್ವದ ಸಭೆ ಕರೆದ ಬಿಜೆಪಿ

ವಿ.ಸಭೆ ಎಲೆಕ್ಷನ್ ಸೋಲಿನ ಬಳಿಕ 2 ಮಹತ್ವದ ಸಭೆ ಕರೆದ ಬಿಜೆಪಿ
bangalore , ಗುರುವಾರ, 7 ಸೆಪ್ಟಂಬರ್ 2023 (18:20 IST)
ಕೈ ನಾಯಕರು ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನವನ್ನು ಗೆಲ್ಲಲು ಎಲ್ಲಾ ಪ್ರಯತ್ನವನ್ನ ಮಾಡುತ್ತಿದ್ದಾರೆ. ಆಪರೇಷನ್ ಹಸ್ತ ಮಾಡುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಗೆ ಟಕ್ಕರ್ ನೀಡಲು ಕಮಲ ದಳ ನಾಯಕರಿಗೆ ಗಾಳ ಹಾಕುವ ಕೆಲಸ ತೆರೆಮರೆಯಲ್ಲಿ ಮುಂದುವರಿಸಿದ್ದಾರೆ.ಮತ್ತೊಂದೆಡೆ ರಾಜ್ಯ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ತಾಲೀಮು ನಡೆಸಿದ್ದು, ಪದಾಧಿಕಾರಿಗಳ ಮತ್ತು ಕಾರ್ಯಕಾರಿಣಿ ಸಭೆ ಕರೆದಿದೆ. ಸೆಪ್ಟೆಂಬರ್ 12 ರಂದು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನಡೆದರೆ, ಸೆಪ್ಟೆಂಬರ್18 ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ.ಇನ್ನು ವಿಧಾನಸಭೆ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಭೆ ಕರೆದಿದ್ದು,ಬಿಜೆಪಿ ವಲಯದಲ್ಲಿ ಇದೀಗ ಸಂಚಲನ ಮೂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

7200 ವಜ್ರಗಳಿಂದ ಮೋದಿ ಫೋಟೋ ತಯಾರಿಸಿದ ಅಭಿಮಾನಿ!