Select Your Language

Notifications

webdunia
webdunia
webdunia
webdunia

1 ಕೋಟಿ ದಾನ ಮಾಡ್ತೀನಿ ಎಂದು ಸಂಕಷ್ಟಕ್ಕೀಡಾದ ವಿಜಯ್ ದೇವರಕೊಂಡ

Vijay Devarakonda
ಹೈದರಾಬಾದ್ , ಗುರುವಾರ, 7 ಸೆಪ್ಟಂಬರ್ 2023 (16:19 IST)
ಹೈದರಾಬಾದ್: ಖುಷಿ ಸಿನಿಮಾ ಮೊದಲ ಎರಡು ದಿನದ ಗಳಿಕೆ ನೋಡಿ ಉಬ್ಬಿಹೋಗಿದ್ದ ನಟ ವಿಜಯ್ ದೇವರಕೊಂಡ ತಮ್ಮ ಸಂಭಾವನೆಯಿಂದ 1 ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದರು. ಆದರೆ ಅವರ ನಿರ್ಧಾರ ಈಗ ಅವರಿಗೇ ಮುಳುವಾಗಿದೆ.

ವಿಜಯ್ ದೇವರಕೊಂಡ ತಲಾ 1 ಲಕ್ಷ ರೂ.ನಂತೆ ಅರ್ಹ ಬಡವರಿಗೆ 1 ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದರು. ಆದರೆ ಖುಷಿ ಸಿನಿಮಾ ಮೊದಲ ಎರಡು ದಿನದ ಬಳಿಕ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಇದರಿಂದಾಗಿ ನಿರ್ಮಾಪಕರಿಗೆ ನಷ್ಟವಾಗಿದೆ.

ವಿಜಯ್ ದೇವರಕೊಂಡ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಅಭಿಷೇಕ್ ನಾಮಾ ನಮಗೆ ವಿತರಣೆಯಲ್ಲಿ 8 ಕೋಟಿ ರೂ. ನಷ್ಟವಾಗಿದೆ. ನೀವೇನೋ ಬಡವರಿಗೆ 1 ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದರು. ಮೊದಲು ನಮ್ಮಂತಹ ನಿರ್ಮಾಪಕರು, ವಿತರಿಕರಿಗೆ ಆದ ನಷ್ಟವನ್ನೂ ಭರ್ತಿ ಮಾಡಿಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಈ ಮೂಲಕ ಬಡವರಿಗೆ ದಾನ ಮಾಡಲು ಹೊರಟ ವಿಜಯ್ ಈಗ ನಿರ್ಮಾಪಕರಿಗೂ ನಷ್ಟ ಭರ್ತಿ ಮಾಡುವ ಸಂಕಷ್ಟಕ್ಕೀಡಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕಿನೇನಿ ನಾಗಾರ್ಜುನಗೆ ನಾಯಕಿಯಾದ ಕನ್ನಡತಿ ಆಶಿಕಾ ರಂಗನಾಥ್