Select Your Language

Notifications

webdunia
webdunia
webdunia
webdunia

ಎಂ.ಎಲ್.ಸಿ.ಯಾಗಿ ಬಿಜೆಪಿಯ ಬಾಬುರಾವ್ ಚಿಂಚನಸೂರ್ ಆಯ್ಕೆ..!!!

webdunia
ಬೆಂಗಳೂರು , ಗುರುವಾರ, 4 ಆಗಸ್ಟ್ 2022 (17:25 IST)
ವಿಧಾನ ಪರಿಷತ್ ಸದಸ್ಯರಾಗಿ ಬಿಜೆಪಿಯ ಬಾಬುರಾವ್ ಚಿಂಚನಸೂರ್ ಅವಿರೋಧ ಆಯ್ಕೆಯಾಗಿದ್ದಾರೆ.
 
ಸಿ.ಎಂ. ಇಬ್ರಾಹಿಂ ಅವರ ರಾಜೀನಾಮೆಯಿಂದ ತೆರವಾದ ಎಂಎಲ್​ಸಿ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿತ್ತು. ಆ.11ರಂದು ಮತದಾನ ನಡೆಯಬೇಕಿತ್ತು.
 
ಬಿಜೆಪಿ ಅಭ್ಯರ್ಥಿಯಾಗಿ ಬಾಬುರಾವ್ ಚಿಂಚನಸೂರ್ ಅಖಾಡಕ್ಕಿಳಿದರೆ, ಕಾಂಗ್ರೆಸ್​ ಮತ್ತು ಜೆಡಿಎಸ್​ನಿಂದ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಹಾಗಾಗಿ ವಿಧಾನಸಭೆ ಕಾರ್ಯದರ್ಶಿಯೂ ಆದ‌ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರು ಬಾಬುರಾವ್ ಚಿಂಚನಸೂರ್ ಹೆಸರನ್ನು ಅವಿರೋಧ ಆಯ್ಕೆಯನ್ನಾಗಿ ಗುರುವಾರ ಘೋಷಣೆ ಮಾಡಿದರು.
 
ಮೇಲ್ಮನೆ ಪ್ರತಿಪಕ್ಷ ನಾಯಕ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಸಿ.ಎಂ. ಇಬ್ರಾಹಿಂ, ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವ ಸ್ಥಾನ ಮತ್ತು ವಿಧಾನ ಪರಿಷತ್​ ಸದಸ್ಯ ಸ್ಥಾನಕ್ಕೆ ಕಳೆದ ಮಾರ್ಚ್​ನಲ್ಲಿ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ತೊರೆದ ಅವರು ಜೆಡಿಎಸ್ ಸೇರ್ಪಡೆಯಾದರು. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ ಇಬ್ರಾಹಿಂಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. 2024ರ ಜೂನ್ 17ರ ವರೆಗೂ ಎಂಎಲ್​ಸಿ ಸದಸ್ಯತ್ವ ಇತ್ತು. ಅವಧಿಗೂ ಮುನ್ನವೇ ಇಬ್ರಾಹಿಂ ರಾಜೀನಾಮೆ ನೀಡಿದ ಹಿನ್ನೆಲೆ ಬಾಬುರಾವ್ ಚಿಂಚನಸೂರ್ ಆಯ್ಕೆಯಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗೆ ನೆಲಕ್ಕುರುಳಿದ ಮನೆ ಜಸ್ಟ್ ಮಿಸ್ ..!!!