Select Your Language

Notifications

webdunia
webdunia
webdunia
webdunia

ಬನ್ನೇರುಘಟ್ಟ ಜೈವಿಕ ವನದಲ್ಲಿ ಜೀಬ್ರಾ ಜನನ

ಬನ್ನೇರುಘಟ್ಟ ಜೈವಿಕ ವನದಲ್ಲಿ ಜೀಬ್ರಾ ಜನನ
bangalore , ಸೋಮವಾರ, 4 ಏಪ್ರಿಲ್ 2022 (20:43 IST)
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ದಿನಾಂಕ: 04-04-2022 ರಂದು ಬೆಳಿಗ್ಗೆ ಸುಮಾರು 3:45 ಕ್ಕೆ ಜೀಬ್ರಾ ಮರಿಯು ಜನಿಸಿರುತ್ತದೆ ಎಂದು ತಿಳಿಸಲು ಸಂತೋಷ ಪಡುತ್ತೇವೆ. ತಾಯಿ ಕಾವೇರಿ ಮತ್ತು ತಂದೆ ಭರತ್ ಸುಮಾರು ಹತ್ತು ವರ್ಷದ ಜೀಬ್ರಾಗಳಾಗಿದ್ದು, ಹೊಸ ಮರಿಯ ಹೆಮ್ಮೆಯ ಪೋಷಕರಾಗಿದ್ದಾರೆ. ಜೀಬ್ರಾ ಮರಿ ಸೇರ್ಪಡೆಯೊಂದಿಗೆ, ಮೃಗಾಲಯದ ಒಟ್ಟು ಜೀಬ್ರಾಗಳ ಸಂಖ್ಯೆ 5ಕ್ಕೆ ಏರಿದೆ. ತಾಯಿ ಮತ್ತು ಮರಿ ಎರಡು ಆರೋಗ್ಯಕರವಾಗಿದ್ದು, ಮರಿಯ ಲಿಂಗವನ್ನು ಇನ್ನೂ ನಿರ್ಧರಿಸಲಾಗಿಲ್ಲ ಮತ್ತು ಅದು ನಮ್ಮ ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲಕರ ವೀಕ್ಷಣೆಯಲ್ಲಿರುತ್ತದೆ ಎಂದು ಡಾ. ಕೆ.ಎಸ್ ಉಮಾಶಂಕರ್, ಸಹಾಯಕ ನಿರ್ದೇಶಕರು (ಪ.ಸೇ) ಇವರು ತಿಳಿಸಿರುತ್ತಾರೆ.
 
ಅಗತ್ಯವಿದ್ದಲ್ಲಿ ಗೌಪ್ಯತೆ ಮತ್ತು ಸುರಕ್ಷತೆಯನ್ನು ಒದಗಿಸಲು ಆವರಣದೊಳಗೆ ವಿಭಾಗವನ್ನು ಒಳಗೊಂಡಂತೆ ತಾಯಿ ಮತ್ತು ಮರಿಗಳಿಗೆ ಉತ್ತಮ ಆರೈಕೆಯನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಶ್ರೀ ಕೆ. ಹರೀಶ, ಉಪ ನಿರ್ದೇಶಕರು ತಿಳಿಸಿದ್ದಾರೆ.
 
 ಸಾಮಾನ್ಯವಾಗಿ ಜೀಬ್ರಾಗಳ ಗರ್ಭಾವಸ್ಥೆಯ ಅವಧಿಯು ಸುಮಾರು ಒಂದು ವರ್ಷಗಳಾಗಿದ್ದು, ಮರಿಯು ಕಂದು ಬಣ್ಣದ ಪಟ್ಟೆಗಳನ್ನು ಹೊಂದಿದ್ದು, ಅದು ಅಂತಿಮವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಪ್ರಸ್ತುತ ಹೊಸದಾಗಿ ಹುಟ್ಟಿದ ಮರಿ ಮತ್ತು ತಾಯಿಯು ಇತರ ಮೂರು ಜೀಬ್ರಾಗಳಾದ ಭರತ್, ಹರಿಶ್ಚಂದ್ರ ಮತ್ತು ಕಬಿನಿಯೊಂದಿಗೆ ಇದ್ದು, ಸಂದರ್ಶಕರು ಮೃಗಾಲಯಕ್ಕೆ ಭೇಟಿ ನೀಡಿದಾಗ ನವಜಾತ ಜೀಬ್ರಾ ಮರಿಯನ್ನು ನೋಡಿ ಆನಂದಿಸಬಹುದಾಗಿರುತ್ತದೆ

Share this Story:

Follow Webdunia kannada

ಮುಂದಿನ ಸುದ್ದಿ

ಸಕಾಲ ಸೇವೆ’ ಯೋಜನೆಯಲ್ಲಿ ‘ತತ್ಕಾಲ್ ಸೇವೆ’ ತರಲು ಚಿಂತನೆ