Webdunia - Bharat's app for daily news and videos

Install App

ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ಗಳ ಹ್ಯಾಂಡಲ್ ಲಾಕ್ ಮುರಿದು ಕಳವು

Webdunia
ಸೋಮವಾರ, 4 ಅಕ್ಟೋಬರ್ 2021 (21:17 IST)
ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ ನಾಲ್ವರನ್ನು ಮಾಗಡಿ ರಸ್ತೆ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಸಯ್ಯದ್ ವಾಜಿದ್ (24), ಸಂತೋಷ್ (21), ಸಾದಿಕ್ ಪಾಷಾ (25), ಸುದೀಪ್ (21) ಬಂಧಿತರು. ಆರೋಪಿಗಳಿಂದ ಆರು ಲಕ್ಷ ರೂ. ಮೌಲ್ಯದ ಎಂಟು ದ್ವಿಚಕ್ರ ವಾಹನಗಳು, 6 ಮೊಬೈಲ್‍ಗಳು, 15 ಬ್ಯಾಟರಿಗಳು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದರು. 
ಮಾಗಡಿ ರಸ್ತೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ  ಸೆ. 12ರಂದು ಮನೆ ಮುಂದೆ ನಿಲ್ಲಿಸಿರುವ ಪಲ್ಸರ್ ಬೈಕ್ ಕಳವಾಗಿರುವ ಬಗ್ಗೆ ಮಾಲೀಕರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಪೆÇಲೀಸರು, ಸೆ. 26 ರಂದು ದರೋಡೆಗೆ ಸಂಚು ರೂಪಿಸುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. 
ಈ ವೇಳೆ ಮಾಗಡಿ ರಸ್ತೆ, ವಿಜಯನಗರ, ಜ್ಞಾನಭಾರತಿ ಪೆÇಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments