Webdunia - Bharat's app for daily news and videos

Install App

ಬೈಕ್ ಗೆ ಕಾರು ಡಿಕ್ಕಿ ಇಬ್ಬರೂ ಸ್ಥಳದಲ್ಲಿಯೇ ದುರ್ಮರಣ

Webdunia
ಸೋಮವಾರ, 19 ಸೆಪ್ಟಂಬರ್ 2022 (20:49 IST)
ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ, ಮತ್ತು ಹಿಂಬದಿಯ ಸವಾರಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಗೋಳೂರು ಗ್ರಾಮದ ವಿದ್ಯಾಪೀಠದ ಬಳಿ ನಡೆದಿದೆ.
50 ವರ್ಷದ ಮಹೇಶ್, 55 ವರ್ಷದ ಮಹದೇವಪ್ಪ ಮೃತ ದುರ್ಧೈವಿಗಳಾಗಿದ್ದಾರೆ. ಚಾಮರಾಜನಗರ ತಾಲೂಕಿನ ಹೆಗ್ಗೋಠರ ಗ್ರಾಮದವರಾಗಿದ್ದು, ಇವರು ಮೈಸೂರಿನಿಂದ ಗಾರೆ ಕೆಲಸ ಮುಗಿಸಿಕೊಂಡು ಬರುವಾಗ ನಂಜನಗೂಡು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಗೋಳೂರು ಗ್ರಾಮದ ವಿದ್ಯಾಪೀಠದ ಬಳಿ ಎದುರುಗಡೆಯಿಂದ ಬಂದ ಕಾರಿನ ಚಾಲಕನ  ಅತಿವೇಗ ಹಾಗೂ ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಕೆಳಗಡೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. 
ವಿಷಯ ತಿಳಿದು ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. 
ಈ ಸಂಬಂಧ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Indore Raja Raghuvanshi murder: ಗಂಡನ ಕೊಲೆ ಮಾಡಿದ ಸೋನಂ ಅದೊಂದನ್ನು ಮಾತ್ರ ಬಿಟ್ಟು ಹೋಗಿದ್ದಳು

Pradeep Eshwar: ಮೋದಿ 11 ವರ್ಷದಲ್ಲಿ ಕಡಿದು ಕಟ್ಟೆ ಹಾಕಿದ್ದಾರೆ ಬಿಡ್ರಿ: ಪ್ರದೀಪ್ ಈಶ್ವರ್

ಕುರ್ಚಿ ಉಳಿಸಿಕೊಳ್ಳಲು ಭಾರತದ ಜೊತೆಗೇ ಯುದ್ಧ ಮಾಡಲು ಹೊರಟಿದ್ದರಂತೆ ಬಾಂಗ್ಲಾ ಪ್ರಧಾನಿ ಯೂನಸ್

ಮುಂದಿನ ಸುದ್ದಿ
Show comments