ಮಂಗಳೂರು: ಧರ್ಮಸ್ಥಳ ಕಳೇಬರಹ ಉತ್ಖನನ ಸಂಬಂಧ ಇದೀಗ ದೂರುದಾರ ಸೂಚಿಸಿದಂತೆ ಎಸ್‌ಐಟಿ ತಂಡ ಬಾಹುಬಲಿ ಬೆಟ್ಟಕ್ಕೆ ತೆರಳಿದೆ.
ನೇತ್ರಾವತಿ ತಟದ ಸುತ್ತಾ ಮುತ್ತಾ ಗುರುತಿಸಿದ ಪಾಯಿಂಟ್‌ಗಳಲ್ಲಿ 13ನೇ ಸ್ಥಳವನ್ನು ಬಿಟ್ಟು ಬೇರೆಲ್ಲ ಕಡೆ ಉತ್ಖನನ ಕಾರ್ಯ ಸಂಪೂರ್ಣಗೊಂಡಿದೆ. ಇದೀಗ 13ನೇ ಪಾಯಿಂಟ್ ಅನ್ನು ಹಾಗೆಯೇ ಬಿಟ್ಟು ಇದೀಗ ದೂರುದಾರ ಬಾಹುಬಲಿ ಪ್ರದೇಶದಲ್ಲಿ ತೋರಿಸಿದ ಕಡೆ ಎಸ್‌ಐಟಿ ತೆರಳಿದೆ.
ಬಾಹುಬಲಿ ಬೆಟ್ಟಕ್ಕೆ ತೆರಳುವ ದಾರಿಯ ಪಕ್ಕದಲ್ಲಿ ಜಾಗವನ್ನು ತೋರಿಸಿದ್ದು, ಅಲ್ಲೇ ಅಗೆಯಲಾಗುತ್ತಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಎಸ್.ಪಿ. ಜಿತೇಂದ್ರ ಕುಮಾರ್ ದಯಾಮ, ವಿಧಿ ವಿಜ್ಞಾನ ತಜ್ಞರು ಅವರು ಸ್ಥಳದಲ್ಲಿದ್ದಾರೆ. ಮುಂಜಾಗೃತ ಕ್ರಮವಾಗಿ ಸುತ್ತಾ ಹೊದಿಕೆಯನ್ನು ಹಾಕಿ ಇದೀಗ ಉತ್ಖನನ ಕಾರ್ಯವನ್ನು ಶುರು ಮಾಡಿದ್ದಾರೆ.
ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವ ಕುರಿತು ಧರ್ಮಸ್ಥಳ ಗ್ರಾಮದಲ್ಲಿ ಒಟ್ಟು 15 ಜಾಗಗಳನ್ನು ತೋರಿಸಿದ್ದು ಅವುಗಳಲ್ಲಿ 14 ಜಾಗಗಳ ಶೋಧಕಾರ್ಯ ಪೂರ್ಣಗೊಂಡಿದೆ. ಇವುಗಳಲ್ಲಿ ಎರಡು ಕಡೆ ಮಾತ್ರ ಮೃತದೇಹಗಳ ಅವಶೇಷ ಸಿಕ್ಕಿದೆ. ಆತ ಮೊದಲ ದಿನ ತೋರಿಸಿದ್ದ 13ನೇ ಜಾಗದಲ್ಲಿ ಇನ್ನಷ್ಟೇ ಶೋಧ ಕಾರ್ಯ ನಡೆಯಬೇಕಿದೆ.