Publish Date: Thu, 14 Feb 2019 (12:17 IST)
Updated Date: Thu, 14 Feb 2019 (12:20 IST)
ಬಿಜೆಪಿ ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಜೆಡಿಎಸ್ ಪ್ರತಿಭಟನೆ ವೇಳೆ ಕಲ್ಲು ತೂರಿದ್ದು ಜೆಡಿಎಸ್ ಕಾರ್ಯಕರ್ತರಲ್ಲವಾ? ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.
ಹಣ ನೀಡಿ ತಮ್ಮ ಮನೆಗೆ ತಾವೇ ಕಲ್ಲು ಹೊಡೆಸಿಕೊಂಡಿದ್ದಾರಾ ಬಿಜೆಪಿ ಕಾರ್ಯಕರ್ತರು ಎಂಬ ಸುದ್ದಿ ಹರಿದಾಡಲಾರಂಭಿಸಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅದನ್ನು ಮುಚ್ಚಿಹಾಕಲು ಶಾಸಕ ಪ್ರೀತಂಗೌಡ ಮಾಡಿದ್ದಾರಾ ಮಾಸ್ಟರ್ ಪ್ಲಾನ್? ಎನ್ನಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಅಭಿಮಾನಿಗಳಿಂದ ಪೋಸ್ಟ್ ಹರಿಬಿಡಲಾಗುತ್ತಿದೆ. ಪ್ರೀತಂ ಸಹಚರರೇ ಕರೆ ಮಾಡಿ ಸುಫಾರಿ ಕೊಟ್ಟಿರೋ ಅಡಿಯೋ ಲಭ್ಯವಾಗಿದೆಯಂತೆ. ಇಂದು 2.30 ಕ್ಕೆ ಆಡಿಯೋ ರಿಲೀಸ್ ಮಾಡೋದಾಗಿ ಪೋಸ್ಟ್ ಮಾಡಿರುವ ಅಭಿಮಾನಿಗಳು ಗಮನ ಸೆಳೆದಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಅಡಿಯೋ ರಿಲೀಸ್ ಮಾಡೋದಾಗಿ ಜೆಡಿಎಸ್ ಅಭಿಮಾನಿಗಳು ಹೇಳಿಕೆ ನೀಡಿದ್ದಾರೆ.